ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು-ಅಡ್ಡಹೊಳೆ ರಾಷ್ಟಿçÃಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಎಲ್ಲೆಡೆ ಧೂಳು ಆವರಿಸಿಕೊಂಡಿದೆ. ಈ ನಡುವೆ ಪದೇ ಪದೇ ವಾಹನ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಮತ್ತು ಪಾದಚಾರಿಗಳು ಎದುರಿಸುತ್ತಿರುವ ವಿವಿಧ ಅಡಚಣೆಗಳ ಬಗ್ಗೆ ದೂರು ಕೇಳಿ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಶುಕ್ರವಾರ ಸಂಜೆ ದಿಢೀರ್ ಭೇಟಿ ನೀಡಿದ್ದಾರೆ.
ಮಾಣಿ-ಕಲ್ಲಡ್ಕ-ಬಿ.ಸಿ.ರೋಡು ರಾಷ್ಟಿçÃಯ ಹೆದ್ದಾರಿ ನಡುವೆ ನಡೆಯುತ್ತಿರುವ ಮೇಲ್ಸೇತುವೆ ಮತ್ತು ಅಂಡರ್ ಪಾಸ್ ಸೇರಿದಂತೆ ಸರ್ವಿಸ್ ರಸ್ತೆ ಅವ್ಯವಸ್ಥೆಗಳನ್ನು ಅವರು ಸ್ವತಃ ಪರಿಶೀಲನೆ ನಡೆಸಿದರು. ಮುಂದಿನ ಮಾರ್ಚ್ ಅಂತ್ಯದೊಳಗೆ ಮಾಣಿ-ಬಿ.ಸಿ.ರೋಡು ನಡುವೆ ಶೇ.೯೫ರಷ್ಟು ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಭರವಸೆ ನೀಡಿದರು. ತಹಸೀಲ್ದಾರ್ ಅರ್ಚನಾ ಡಿ.ಭಟ್, ಕಂದಾಯ ನಿರೀಕ್ಷಕ ಜೆ. ಜನಾರ್ದನ, ವಿಜಯ ಆರ್., ಪ್ರಾಜೆಕ್ಟ್ ಮೆನೇಜರ್ ಮಹೇಂದ್ರ ಸಿಂಗ್, ಸಂಚಾರಿ ಠಾಣೆ ಎಸೈ ಸುತೇಶ್ ಮತ್ತಿತರರು ಇದ್ದರು.
ಬಂಟ್ವಾಳ: ಜಿಲ್ಲಾಧಿಕಾರಿ ಭೇಟಿ ಕಲ್ಲಡ್ಕ -ಮಾಣಿ ಹೆದ್ದಾರಿ ಕಾಮಗಾರಿ ವೀಕ್ಷಣೆ
RELATED ARTICLES