ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಸಮೀಪದ ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಧಾನಪರಿಷತ್ ಚುನಾವಣೆ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಮುಲ್ಲೆೈ ಮುಗಿಲನ್ ಭಾನುವಾರ ಭೇಟಿ ನೀಡಿದರು. ತಹಶೀಲ್ದಾರ್ ಅರ್ಚನಾ ಡಿ.ಭಟ್ ಮತಗಟ್ಟೆಗಳ ಬಗ್ಗೆ ಮಾಹಿತಿ ನೀಡಿದರು.
ನಗರ ಠಾಣಾ ಇನ್ಸ್ ಪೆಕ್ಟರ್ ಆನಂತ ಪದ್ಮನಾಭ, ಗ್ರಾಮಾಂತರ ಠಾಣಾ ಇನ್ಸ್ ಪೆಕ್ಟರ್ ಶಿವಕುಮಾರ್, ಎಸೈ ರಾಮಕೃಷ್ಣ, ಹರೀಶ್, ಸುತೇಶ್, ಸಂಜೀವ, ಉಪತಹಶೀಲ್ದಾರ್ ನವೀನ್ ಬೆಂಜನಪದವು, ನರೇಂದ್ರ ಭಟ್, ಕಂದಾಯ ನಿರೀಕ್ಷಕ ಜನಾರ್ಧನ, ವಿಜಯ್, ಪ್ರಶಾಂತ್ ವಿಟ್ಲ ಮತ್ತಿತರರು ಇದ್ದರು.
೫೩ ಮತಗಟ್ಟೆ:
ತಾಲ್ಲೂಕಿನಲ್ಲಿ ಒಟ್ಟು ೭೯೫ ಮಂದಿ ಮತದಾರರಿದ್ದು, ಈ ಪೈಕಿ ೩೮೧ ಪುರುಷರು ಮತ್ತು ೪೧೪ ಮಹಿಳಾ ಮತದಾರರಿದ್ದಾರೆ. ಒಟ್ಟು ೫೧ ಗ್ರಾಮ ಪಂಚಾಯಿತಿ ಸೇರಿದಂತೆ ಬಂಟ್ವಾಳ ಪುರಸಭೆ ಮತ್ತು ವಿಟ್ಲ ಪಟ್ಟಣ ಪಂಚಾಯಿತಿ ಹೀಗೆ ಒಟ್ಟು ೫೩ ಮತಗಟ್ಟೆಗಳಲ್ಲಿ ಇದೇ ೨೧ರಂದು ಬೆಳಿಗ್ಗೆ ೮ ಗಂಟೆಗೆ ಮತದಾನ ಆರಂಭಗೊಂಡು ಸಂಜೆ ೪ ಗಂಟೆಗೆ ಮುಕ್ತಾಯಗೊಳ್ಳಲಿದೆ.
ಒಟ್ಟು ೬ ಸೆಕ್ಟರ್ ಅಧಿಕಾರಿ ಸಹಿತ ೫೩ ಪಿ.ಆರ್.ಒ., ೫೩ ಎಪಿಆರ್ ಒ, ೫೩ ಪಿ.ಒ. ಅಧಿಕಾರಿ ಹಾಗೂ ೫೩ ಡಿ.ಗ್ರೂಪ್ ನೌಕರರು ಸೇರಿದಂತೆ ಒಟ್ಟು ೨೧೬ ಮಂದಿ ಸಿಬ್ಬಂದಿಗಳು ಮತ್ತು ೫ ಮೈಕ್ರೋ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಹಶಿಲ್ದಾರ್ ಅರ್ಚನಾ ಭಟ್ ತಿಳಿಸಿದರು.
ಬಂಟ್ವಾಳ: ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ
RELATED ARTICLES