ಎಸ್ ಎಸ್ ಎಲ್ ಸಿ, ಪಿಯೂಸಿ ಶಿಕ್ಷಣ ತಪಸ್ಸು: ಡಾ. ಎಂ.ಮೋಹನ ಆಳ್ವ
ಬಂಟ್ವಾಳ:ಪ್ರತೀ ವ್ಯಕ್ತಿಯ ಜೀವನದಲ್ಲಿ ಉನ್ನತ ಮಟ್ಟ ತಲುಪಲು ಎಸ್ ಎಸ್ ಎಲ್ ಸಿ ಮತ್ತು ಪಿಯೂಸಿ ಎಂಬ ಶೈಕ್ಷಣಿಕ ಕಾಲಘಟ್ಟವು ಮಹತ್ತರ ಪಾತ್ರವಹಿಸುತ್ತದೆ. ಇಲ್ಲಿ ಗರಿಷ್ಟ ಮಟ್ಟದ ಅಂಕ ಗಳಿಸಿ ಅತ್ಯುನ್ನತ ಫಲಿತಾಂಶ ದಾಖಲಿಸಲು ಶಿಸ್ತುಬದ್ಧ ಅಧ್ಯಯನವು ಒಂದು ತಪಸ್ಸಿನ ಫಲದಂತೆ ಮೂಡಿ ಬರುತ್ತದೆ ಎಂದು ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ‘ಪಿಯೂಸಿ ಶಿಕ್ಷಣ ಭವಿಷ್ಯದ ಅವಕಾಶಗಳು’ ಎಂಬ ವಿಷಯಕ್ಕೆ ಸಂಬAಧಿಸಿದAತೆ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿದಿನ ರಾತ್ರಿ ೧೦ ಗಂಟೆಗೆ ಕಡ್ಡಾಯವಾಗಿ ಮಲಗಿ ಬೆಳಿಗ್ಗೆ ೫ ಗಂಟೆಗೆ ಎದ್ದು ಓದುವ ಪರಿಪಾಠ ಜೊತೆಗೆ ಸಮಯ ಪಾಲನೆ ಸಹಿತ ದೇವರು ಮತ್ತು ಗುರುಹಿರಿಯರಿಗೆ ನಮಿಸಿ ಗೌರವಿಸುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಸಂಸ್ಥೆ ಮಾತ್ರವಲ್ಲದೆ, ಶಿಕ್ಷಕರು ಮತ್ತು ಪೋಷಕರ ಸಹಕಾರದಲ್ಲಿ ವಿದ್ಯಾರ್ಥಿಗಳು ಆತ್ಮಸ್ಥೆöÊರ್ಯದಿಂದ ಮುನ್ನಡೆದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದರು.
ಎನ್.ಪ್ರಕಾಶ ಕಾರಂತ್, ಪ್ರೊಕೆ ತುಕಾರಾಮ ಪೂಜಾರಿ, ಭುವನೇಶ ಪಚ್ಚಿನಕ್ಕ , ಸುದರ್ಶನ್ ಜೈನ್, ಟಿ ತಾರನಾಥ ಕೊಟ್ಟಾರಿ, ಉಮೇಶ್ ಬೆಂಜನಪದವು,
ಪ್ರಮುಖರಾದ ಎನ್.ಪ್ರಕಾಶ ಕಾರಂತ, ಪ್ರೊ.ಕೆ.ತುಕಾರಾಮ ಪೂಜಾರಿ, ಕೆ.ಹರಿಕೃಷ್ಣ ಬಂಟ್ಟಾಳ್, ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಭುವನೇಶ್ ಪಚ್ಚಿನಡ್ಕ, ಸ್ಥಳೀಯ ವಿದ್ಯಾರ್ಥಿ ವಿಭಾಗ ಸಂಚಾಲಕ ಅನಿಲ್ ಮಸ್ಕರೇನಸ್ ಮತ್ತಿತರರು ಇದ್ದರು.
ಬಂಟ್ವಾಳ ನುಡಿಸಿರಿ ಘಟಕ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಸ್ವಾಗತಿಸಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ವಂದಿಸಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಂಟ್ವಾಳ: ಶೈಕ್ಷಣಿಕ ಮಾರ್ಗದರ್ಶನ ಬಗ್ಗೆ ಮಾಹಿತಿ
RELATED ARTICLES