Saturday, December 14, 2024
Homeಬಂಟ್ವಾಳಬಂಟ್ವಾಳ :ಎನ್.ಎಸ್.ಎಸ್ ಸಮಾರೋಪ ಸಮಾರಂಭ

ಬಂಟ್ವಾಳ :ಎನ್.ಎಸ್.ಎಸ್ ಸಮಾರೋಪ ಸಮಾರಂಭ

ಬಂಟ್ವಾಳ : ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಉತ್ತೇಜನ ನೀಡುತ್ತದೆ. ವಿದ್ಯಾರ್ಥಿಗಳು ಮಹಾತ್ಮಗಾಂಧೀಜಿಯವರ ಕನಸಿನಂತೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಫಗೊಳಿಸುವುದು ಮಾತ್ರವಲ್ಲದೇತಮ್ಮಅಂತರಂಗವನ್ನುಸ್ವಚ್ಫಗೊಳಿಸಿಕೊಳ್ಳಬೇಕು.ಈ ವರ್ಷದಲ್ಲಿ ನಡೆದ ವಿಶೇಷ ಶಿಬಿರವು ‘ಗಾಂಧಿಜಯಂತಿಯ’ ದಿನದಂದು ನಡೆದಿರುವುದು ನಿಮ್ಮೆಲ್ಲರ ಅದೃಷ್ಟವೆಂದೇ ಹೇಳಬೇಕು. ಗಾಂಧೀಜಿಯವರ ‘ಸ್ವಚ್ಫತಾ ಹೀ ಸೇವಾ’ ಎಂಬ ಪರಿಕಲ್ಪನೆಯ ಅಡಿಯಲ್ಲಿ ಶಿಬಿರಾರ್ಥಿಗಳು ಬಾಹ್ಯಸ್ವಚ್ಫತೆಗಿಂತಲೂತಮ್ಮ ಮನಸ್ಸನ್ನುಸ್ವಚ್ಫಗೊಳಿಸಿಕೊಂಡು ಸಂಸ್ಕಾರದಲ್ಲಿಸ್ವಚ್ಫತೆ, ಸ್ವಭಾವದಲ್ಲಿಸ್ವಚ್ಫತೆಯನ್ನು ಮಾಡಿಕೊಂಡಾಗಸ್ವಸ್ಥ ಸಮಾಜದ ನಿರ್ಮಾಣ ಮಾಡಬಹುದೆಂದು ಶ್ರೀ ವೆಂಕಟರಮಣ ಸ್ವಾಮೀ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾತ್ಮಕ ಪ್ರಾಂಶುಪಾಲ ಡಾ|ಸುಯೋಗ ವರ್ಧನ್‌ಡಿ.ಎಂ ಹೇಳಿದರು.
ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ರಾಯಿ,ಇಲ್ಲಿದಿನಾಂಕ ೦೧-೧೦-೨೦೨೪ ರಂದುಆರಂಭಗೊಂಡ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವಕಾಲೇಜಿನರಾಷ್ಟ್ರೀಯಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ದಿನಾಂಕ ೦೭-೧೦-೨೦೨೪ ರಂದು ಮುಕ್ತಾಯಗೊಂಡ ಹಿನ್ನಲೆಯಲ್ಲಿಸಮಾರೋಪ ಸಮಾರಂಭದಅಧ್ಯಕ್ಷತೆ ವಹಿಸಿ ಇವರುಮಾತನಾಡಿದರು.
ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ರಾಯಿ,ಇದರಎಸ್‌ಡಿಎಂಸಿ ಅಧ್ಯಕ್ಷ ಹರೀಶ್‌ಆಚಾರ್ಯ, ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ರಾಯಿ,ಇದರ ಮುಖ್ಯೋಪಾಧ್ಯಾಯಿನಿ ಜಾನೆಟ್‌ಕೊನ್ಸೆಸೋ, ಸಹಶಿಕ್ಷಕಿ ಶ್ರೀಮತಿ ಬೇಬಿ , ರಾಷ್ಡ್ರೀಯ ಸೇವಾ ಯೋಜನೆಯಘಟಕನಾಯಕಧನುಷ್ ಮತ್ತುಘಟಕ ನಾಯಕಿಪ್ರಾಜ್ಞವಿ ವೇದಿಕೆಯಲ್ಲಿಉಪಸ್ಥಿತರಿದ್ದರು. ಸಹಶಿಬಿರಾಧಿಕಾರಿಗಳಾದ ಗೀತಾ, ರೂಪ, ಶ್ವೇತಾ, ಮಹೇಶ್, ಮುಸ್ತಾಫ ಮತ್ತುಗಣೇಶ್ ಮತ್ತಿತರರ ಸಹಕಾರದಿಂದಾಗಿಶಿಬಿರವು ಯಶ್ವಸಿಯಾಗಿ ಪೂರ್ಣಗೊಂಡಿತು.
ಶಿಬಿರಾರ್ಥಿಗಳಾದ ಗೌತಮ್ ಮತ್ತುತೃಪ್ತಿ.ಡಿ.ಕುಲಾಲ್ ಅನಿಸಿಕೆ ಅಭಿವ್ಯಕ್ತಪಡಿಸಿದರು.ಶಿಬಿರಾರ್ಥಿಗಳು ಎನ್ನೆಸ್ಸೆಸ್‌ಆಶಯಗೀತೆ ಹಾಡಿದರು.ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಸುದರ್ಶನ್ ಬಿ ಪ್ರಸ್ತಾವನೆಗೈದರು.ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವಕಾಲೇಜು ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಲಕ್ಷ್ಮೀನಾರಾಯಣ ಕೆ ಸ್ವಾಗತಿಸಿದರು.ರಾಷ್ಟ್ರೀಯಸೇವಾ ಯೋಜನಾಘಟಕದ ಶಿಬಿರಾಧಿಕಾರಿ ಶಶಿಧರ್.ಎಸ್ ವಂದಿಸಿದರು.ಸಹ ಶಿಬಿರಾಧಿಕಾರಿ ಕು.ಭವಿತಾಕರ‍್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular