ಬಂಟ್ವಾಳ : “ತುಳುನಾಡಿನ ಸಂಸ್ಕೃತಿ, ಆಚರಣೆಗಳು, ಭಾಷೆ ಹಾಗೂ ತಿನಿಸುಗಳು ಇಲ್ಲಿನ ವಿಶಿಷ್ಟ ಪರಂಪರೆಯನ್ನು ಸಾರುತ್ತದೆ. ಇಂತಹ ಆಚರಣೆಗಳ ಅರಿವು ಎಲ್ಲರಿಗೂ ಅಗತ್ಯವಾಗಿದೆ. ತುಳುನಾಡಿನ ಜನರು ಸಂಸ್ಕೃತಿಯ, ಆಚಾರಗಳನ್ನು ಅನುಸರಿಸಿ ಹೊಂದಾಣಿಕೆಯಿಂದ ಬಾಳುತ್ತಿದ್ದಾರೆ” ಎಂದು ಎಸ್.ವಿ.ಎಸ್. ಆಂಗ್ಲಮಾಧ್ಯಮ ಶಾಲೆಯ ಸಂಸ್ಕೃತ ಅಧ್ಯಾಪಕರಾದ ಪರಮೇಶ್ವರ ಅವರು ಹೇಳಿದರು.
ಅವರು ಬಂಟ್ವಾಳದ ವಿದ್ಯಾಗಿರಿಯಲ್ಲಿರುವ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ ಸ್ಕೌಟ್ಸ್, ಗೈಡ್ಸ್, ಕಬ್ಸ್, ಬುಲ್‌ಬುಲ್ಸ್ ವಿದ್ಯಾರ್ಥಿಗಳು ಆಯೋಜಿಸಿದ್ದ “ತುಳು ಸಿರಿದೊಂಪ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಾಲಾ ಪ್ರಾಂಶುಪಾಲೆ ಜೂಲಿ ಟಿ.ಜೆ. ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲೆ ಪೂರ್ಣೇಶ್ವರಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಕೌಟ್ ಮಾಸ್ಟರ್ ಹರೀಶ್ ಆಚಾರ್ಯ, ಗೈಡ್ ಕ್ಯಾಪ್ಟನ್ ಕೇಶವತಿ, ಕಬ್ ಮಾಸ್ಟರ್ ಯೋಗಿನಿ, ಫ್ಲಾಕ್ ಲೀಡರ್ ಅನಿತಾ ಡಿಸೋಜ ಮತ್ತು ವಸಂತಿ ಮಾರ್ಗದರ್ಶನ ನೀಡಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ತುಳುನಾಡಿನ ಪಾಡ್ದನ, ಕಥೆ, ಹಾಡು, ಗಾದೆ ಮಾತು, ಒಗಟುಗಳು, ಹುಲಿಕುಣಿತ, ಜಾನಪದ ನೃತ್ಯಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದರು. 9ನೇ ತರಗತಿಯ ಗೈಡ್ಸ್ ಫಾತೀಮ ಇಶ್ರೀನ್ ಹಾಗೂ ಅನನ್ಯ ಎಂ ಕಾರ್ಯಕ್ರಮ ನಿರ್ವಹಿಸಿದರು.
ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್: ಪ್ರಾದೇಶಿಕವಾಗಿ ವಿಭಿನ್ನ ಆಚರಣೆಗಳ ಅರಿವಿರಬೇಕು-ಪರಮೇಶ್ವರ
RELATED ARTICLES