ಬಂಟ್ವಾಳ:ಇಲ್ಲಿನ ಸ್ವಾತಂತ್ರö್ಯ ಹೋರಾಟಗಾರ ದಿವಂಗತ ಡಾ.ಅಮ್ಮೆಂಬಳ ಬಾಳಪ್ಪ ಮತ್ತು ಹಿರಿಯ ಸಹಕಾರಿ ಹೂವಯ್ಯ ಮೂಲ್ಯ ಇವರ ನೇತೃತ್ವದಲ್ಲಿ ಕಳೆದ ೧೯೮೧ರಲ್ಲಿ ಆರಂಭಗೊAಡು ಪ್ರಸಕ್ತ ೧೬ ಶಾಖೆಗಳನ್ನು ಹೊಂದಿರುವ ಸಮಾಜ ಸೇವಾ ಸಹಕಾರಿ ಸಂಘವು ಕಳೆದ ಸಾಲಿನಲ್ಲಿ ಒಟ್ಟು ರೂ ೯೮೨.೫೪ ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ರೂ ರೂ ೫.೭೧ ಕೋಟಿ ಲಾಭ ಗಳಿಸುವ ಮೂಲಕ ಸದಸ್ಯರಿಗೆ ಶೇ.೧೭ ಡಿವಿಡೆಂಡ್ ವಿತರಿಸಿದೆ ಎಂದು ಸಂಘದ ಅಧ್ಯಕ್ಷ ಸುರೇಶ ಕುಲಾಲ್ ಹೇಳಿದ್ದಾರೆ.
ಬಂಟ್ವಾಳದಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಮುಂಬರುವ ಫೆ.೯ರಂದು ನಡೆಯಲಿರುವ ಆಡಳಿತ ಮಂಡಳಿ ಚುನಾವಣೆ ಗಮನದಲ್ಲಿಸಿಕೊಂಡು, ಮಂಗಳೂರು ಪಡೀಲ್ ಶಾಖೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಕೆಲವೊಂದು ವ್ಯಕ್ತಿಗಳು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಅವರು ಟೀಕಿಸಿದರು.
ಈ ಹಿಂದೆ ಪಡೀಲ್ ಶಾಖೆಯಲ್ಲಿ ಪುತ್ತೂರು ತಾಲ್ಲೂಕಿನ ಈಶ್ವರಮಂಗಲ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಎಂಬವರು ಚಿನ್ನದ ಬಳೆಗಳನ್ನು ಅಡವಿಟ್ಟು ರೂ ೨.೧೧ ಕೋಟಿ ಮೊತ್ತದ ತ್ವರಿತ ಸಾಲ ಪಡೆದುಕೊಂಡಿದ್ದರು. ಇಲ್ಲಿನ ಶಾಖಾಧಿಕಾರಿ ಪರಿಶೀಲನೆ ನಡೆಸಿದಾಗ ನಕಲಿ ಚಿನ್ನಾಭರಣಕ್ಕೆ ಸಂಬAಧಿಸಿದAತೆ ಏಲಂ ನಡೆಸಿ ವಿವೇಕ ಆಚಾರ್ಯ ಎಂಬವರು ಚಿನ್ನಾಭರಣ ಪಡೆದು ಆಭರಣ ಸಾಲ ಚುಕ್ತಗೊಳಿಸಿದ್ದಾರೆ. ಇದರಿಂದಾಗಿ ಕರ್ತವ್ಯ ಲೋಪ ಎಸಗಿದ ಶಾಖಾಧಿಕಾರಿಗೆ ದೀರ್ಘಾವಧಿ ರಜೆ ನೀಡಲಾಗಿದ್ದು, ಶಾಖೆ ಅಥವಾ ಗ್ರಾಹಕರಿಗೆ ಯಾವುದೇ ರೀತಿಯ ನಷ್ಟ ಉಂಟಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಲೋಕನಾಥ ಎಂಬವರು ಸುಳ್ಳು ದಾಖಲೆ ಸೃಷ್ಟಿಸಿ ಆಡಳಿತ ಮಂಡಳಿಗೆ ತೇಜೋವಧೆ ಮಾಡುವುದಕ್ಕಾಗಿ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದು, ಈ ದೂರು ಕಾನೂನು ಬಾಹಿರ ಎಂದು ಮನಗಂಡ ಹೈಕೋರ್ಟು ತಡೆಯಾಜ್ಞೆ ನೀಡಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಪದ್ಮನಾಭ ವಿ., ನಿರ್ದೇಶಕರಾದ ಅರುಣ್ ಕುಮಾರ್, ಜನಾರ್ದನ ಬೊಂಡಾಲ, ರಮೇಶ ಸಾಲ್ಯಾನ್, ಜಯಂತಿ, ಬಿ.ರಮೇಶ ಸಾಲ್ಯಾನ್ ಇದ್ದರು.
ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ರೂ ೫.೭೧ ಕೋಟಿ ಲಾಭ, ಶೇ.೧೭ ಡಿವಿಡೆಂಡ್ ವಿತರಣೆ ಚುನಾವಣೆ ಗಮನದಲ್ಲಿಸಿ ಸುಳ್ಳು ಆರೋಪಕ್ಕೆ ಖಂಡನೆ
RELATED ARTICLES