ಬಂಟ್ವಾಳ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ‘ವಿಶ್ವರೂಪ ದರ್ಶನ’ ಪ್ರಯುಕ್ತ ಭಕ್ತರು ಸಾಲು ಸಾಲು
ದೀಪ ಬೆಳಗಿಸಿದರು.
23ನೇ ವರ್ಷದ ವಿಶ್ವರೂಪ ದರ್ಶನ ಹಿನ್ನೆಲೆಯಲ್ಲಿ ದೇವರಿಗೆ ಕಾಕಡಾರತಿ, ಜಾಗರ ಪೂಜೆ ಸಲ್ಲಿಸಿ ವಿಶೇಷ ಅಲಂಕಾರ ಪೂಜೆ ಮತ್ತು ಭಜನೆ ನಡೆಯಿತು. ದೀಪ, ತಾವರೆ, ಗಣಪತಿ, ಬ್ರಹ್ಮ, ಶಂಖ, ಓಂ ಮತ್ತಿತರ ಚಿತ್ತಾರಗಳು ದೀಪದಲ್ಲಿ ಕಂಡು ಬಂದು ಭಕ್ತರು ಸಂತಸ ಪಟ್ಟರು.