Saturday, December 14, 2024
HomeUncategorizedಬಂಟ್ವಾಳ: ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ಬೆಳ್ಳಿಹಬ್ಬಕ್ಕೆ ೨೫ ಶಾಖೆಯಾಗಲಿ: ಎಂ.ಎನ್.ರಾಜೇಂದ್ರ ಕುಮಾರ್

ಬಂಟ್ವಾಳ: ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ಬೆಳ್ಳಿಹಬ್ಬಕ್ಕೆ ೨೫ ಶಾಖೆಯಾಗಲಿ: ಎಂ.ಎನ್.ರಾಜೇಂದ್ರ ಕುಮಾರ್


ಬಂಟ್ವಾಳ:ಅವಿಭಜಿತ ಜಿಲ್ಲೆಯಲ್ಲಿ ಗುಣಮಟ್ಟದ ಸೇವೆ ನೀಡುವ ಮೂಲಕ ತ್ವರಿತವಾಗಿ ಸ್ಪಂದಿಸುವ ಸಹಕಾರಿ ಸಂಘಗಳು ಜನತೆಗೆ ಹತ್ತಿರವಾಗಿದೆ. ಇಲ್ಲಿನ ವರ್ತಕರಿಂದಲೇ ಆರಂಭಗೊಂಡ ವರ್ತಕರ ಸಹಕಾರಿ ಸಂಘವು ಬೆಳ್ಳಿಹಬ್ಬದ ವೇಳೆ ೨೫ ಶಾಖೆಯಾಗಿ ಮೂಡಿ ಬರಲಿ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡಿನಲ್ಲಿ ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಶನಿವಾರ ನಡೆದ ‘ವಿಂಶತಿ ಸಂಭ್ರಮ ಸದಸ್ಯರ ಸಮಾಗಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ‘ಸಹಕಾರಿ ಸಂಘಗಳು ಪರಸ್ಪರ ಸಹಕಾರಿ ತತ್ವದ ಮೂಲಕ ಆರ್ಥಿಕವಾಗಿ ಜನರನ್ನು ಬಲಾಢ್ಯಗೊಳಿಸುತ್ತದೆ’ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ‘ದೇಶಕ್ಕೆ ರಾಷ್ಟ್ರೀಕೃತ ಬ್ಯಾಂಕ್ ನೀಡಿದ ಅವಿಭಜಿತ ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಜನರಲ್ಲಿ ಆರ್ಥಿಕ ಶಕ್ತಿ ತುಂಬಿದೆ’ ಎಂದರು.
ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧವಳ ಸಹಕಾರಿ ಸಂಘದ ಅಧ್ಯಕ್ಷ ಸುದರ್ಶನ್ ಜೈನ್, ಪುರಸಭಾಧ್ಯಕ್ಷ ವಾಸು ಪೂಜಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ ಕಲ್ಲಡ್ಕ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಸಾರ್ವಜನಿಕ ಉದ್ಯೋಗಸ್ಥರ ಸಹಕಾರಿ ಸಂಗದ ಅಧ್ಯಕ್ಷ ಜಯಂತ ನಾಯಕ್, ಸಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್, ಅಧ್ಯಾಪಕರ ಸಹಕಾರಿ ಸಂಘದ ಅಧ್ಯಕ್ಷ ರಮೇಶ ನಾಯಕ್ ರಾಯಿ, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ದೇವಾಡಿಗ ಶುಭ ಹಾರೈಸಿದರು.
ಸಂಘದ ಉಪಾಧ್ಯಕ್ಷ ಮಂಜುನಾಥ ರೈ ಅಗರಿ, ಸಿಇಒ ಅಜಿತ್ ಕುಮಾರ್ ಜೈನ್, ನಿರ್ದೇಶಕರಾದ ಸ್ವಪ್ನಾ ರಾಜರತ್ನ, ರಾಜೇಶ ಬಿ., ಗಜೇಂದ್ರ ಪ್ರಭು, ವಿಜಯಕುಮಾರಿ ಇಂದ್ರ, ಸುಧಾಕರ ಸಾಲ್ಯಾನ್, ಮೈಕೆಲ್ ಡಿಕೋಸ್ತ, ಹೇಮಂತ್ ಕುಮಾರ್ ಜೈನ್, ರವೀಂದ್ರ, ನಾರಾಯಣ ಸಿ.ಪೆರ್ನೆ, ಡಾ.ಸುದೀಪ್ ಕುಮಾರ್ ಜೈನ್, ಬಟ್ಯಪ್ಪ ಶೆಟ್ಟಿ, ಜಯರಾಜ್ ಇದ್ದರು.
ನಿರ್ದೇಶಕ ದಿವಾಕರದಾಸ್ ಸ್ವಾಗತಿಸಿ, ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ಲೋಕೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular