ಬಂಟ್ವಾಳ ತಾಲೂಕಿನ ಚೆನೈತ್ತೋಡಿ ಗ್ರಾಮದ ಉಳಗುಡ್ಡೆ ಎಂಬಲ್ಲಿ ತುಳುನಾಡಿನ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುವ ತುಳುವರೊಬ್ಬರು ತನ್ನ ಹೊಸ ಮನೆ “ಶ್ರೀ” ನಿವಾಸ ದ ಗೋಡೆಯ ಮೇಲೆ ತುಳುನಾಡ ಬಾವುಟದ ಚಿತ್ರ ಮೂಡಿಸುವ ಮೂಲಕ ತನ್ನ ಮಾತೃಭೂಮಿಯ ಮೇಲಿರುವ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಗಣೇಶ್ ಶೆಟ್ಟಿಯವರು ಗೋವಾದಲ್ಲಿ ವೃತ್ತಿಯನ್ನು ಮಾಡುತ್ತಿದ್ದು ತುಳುನಾಡು ಹಾಗೂ ತುಳು ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿದ್ದಾರೆ.
ಮುಂದಿನ ಪೀಳಿಗೆ ತುಳುನಾಡಿನ ಆಚಾರ ವಿಚಾರ ಸಂಸ್ಕೃತಿಯನ್ನು ಬೆಳೆಸಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಅವರಿಗೆ ಮಾದರಿಯಾಗುವ ರೀತಿಯಲ್ಲಿ ತನ್ನ ಅಭಿಮಾನವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೇಶ್ ಶೆಟ್ಟಿ ಜೆಪ್ಪು ಆಗಮಿಸಿ ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದರು. ಈ ಸಂದರ್ಭ ಕುಟುಂಬಸ್ಥರು ಊರವರು ಉಪಸ್ಥಿತರಿದ್ದರು.