ತುಮಕೂರು: ಕರ್ನಾಟಕದಲ್ಲಿ ಬಾಣಂತಿಯರ ಸಾವು ಮುಂದುವರಿದಿದೆ. ಬಳ್ಳಾರಿ, ಬೆಳಗಾವಿ, ಬೆಂಗಳೂರು ಬಳಿಕ ಇದೀಗ ತುಮಕೂರಿನಲ್ಲೂ ಬಾಣಂತಿ ಸಾವಾಗಿದೆ. ಜಿಲ್ಲೆಯ ತಿಪಟೂರು ತಾಲೂಕು ಆಸ್ಪತ್ರೆಯಲ್ಲಿ ಸಿಸೇರಿಯನ್ ಆದ ಕೆಲವೇ ಗಂಟೆಗಳಲ್ಲಿ ಬಾಯಿ, ಮೂಗಿನಲ್ಲಿ ರಕ್ತ ಬಂದು ಬಾಣಂತಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಫಿರ್ದೋಸ್(26) ಮೃತ ಬಾಣಂತಿ.
ಬೆಂಗಳೂರಿನ ಡಿ.ಜೆ.ಹಳ್ಳಿಯ ಮೋದಿ ರೋಡ್ ನಿವಾಸಿ ಫಿರ್ದೋಸ್, ಹೆರಿಗೆಗಾಗಿ ತಿಪಟೂರಿನ ಗಾಂಧಿನಗರದ ತವರು ಮನೆಗೆ ಹೋಗಿದ್ದರು. ಡಿ.27ರಂದು ಹೆರಿಗೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿದ್ದರು. ಎರಡನೇ ಮಗುವಿಗೆ ಸಿಸೇರಿಯನ್ ಮಾಡಿಸಿಕೊಂಡಿದ್ದ ಫಿರ್ದೋಸ್, ಬಳಿಕ ಕೆಮ್ಮು ಅತಿಯಾಗಿದೆ.
ಕೆಮ್ಮು ಕಫ ಜೋರಾಗಿದ್ದರಿಂದ ಮೂಗು ಮತ್ತು ಬಾಯಲ್ಲಿ ರಕ್ತ ಬರಲಾರಂಬಿಸಿತ್ತು. ನಿನ್ನೆ ಮಧ್ಯರಾತ್ರಿ 2.30ರಲ್ಲಿ ಮೃತಪಟ್ಟಿದ್ದಾರೆ. ಇನ್ನು ಈ ಘಟನೆ ಬಗ್ಗೆ ವೈದ್ಯರನ್ನು ಕೇಳಿದರೆ, ಮಹಿಳೆಗೆ ಪಲ್ಮನರಿ ಎಂಬಾಲಿಸಮ್ ಇದ್ದು, ಈ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎನ್ನುತ್ತಿದ್ದಾರೆ ಎನ್ನಲಾಗಿದೆ.