ದಾವಣಗೆರೆ:ವಿಜಯಪುರದ ಬಸವನಬಾಗೇವಾಡಿಯ ಬಸವ ಜನ್ಮ ಸ್ಥಳ ಜಿಲ್ಲಾ ಘಟಕ ಬಸವ ಜನ್ಮಭೂಮಿ ಪ್ರತಿಷ್ಠಾನದಿಂದ ಇತ್ತೀಚಿಗೆ ವಿಜಯಪುರದ ಚೇತನಾ ಕಾಲೇಜು ಸಭಾಂಗಣದಲ್ಲಿ ರಾಜ್ಯ ಮಟ್ಟದ ವಚನ ವೈಭವದ ಕಾರ್ಯಕ್ರಮದಲ್ಲಿ ದಾವಣಗೆರೆಯ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ “ಬಸವ ಭೂಷಣ” ರಾಜ್ಯ ಪ್ರಶಸ್ತಿಯನ್ನು ವಿತರಿಸಲಾಯಿತು ಎಂದು ಪ್ರತಿಷ್ಠಾನದ ಸಂಚಾಲಕರಾದ ಮುರುಗೇಶ್ ಸಂಗಮ ತಿಳಿಸಿದ್ದಾರೆ.
ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ಸಾಂಸ್ಕೃತಿಕ ನಗರಿಯಾಗಿ ಪರಿವರ್ತನೆಗೊಳಿಸುವ ಸಾಧನೆಗಳನ್ನು ಗುರುತಿಸಿ ನಿರಂತರವಾಗಿ ಕಠಿಣ ಪರಿಶ್ರಮದಿಂದ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ, ಶಿಕ್ಷಣ, ಆಧ್ಯಾತ್ಮ, ಸಮಾಜಸೇವೆ ಸೇರಿದಂತೆ ಹೊಸ ಹೊಸ ಪರಿಕಲ್ಪನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಪ್ರಾಥಮಿಕ ಶಿಕ್ಷಣಕ್ಕೆ ಸೀಮಿತವಾದ ಈ ಪ್ರತಿಷ್ಠಾನ ಪ್ರಶಸ್ತಿಗೆ ಭಾಜನರಾದ ಕಲಾಕುಂಚ, ಕಾವ್ಯಕುಂಚ, ಗಾನಕುಂಚ, ಯಕ್ಷರಂಗ, ಸಿನಿಮಾಸಿರಿ, ಕರ್ನಾಟಕ ಸಗಮ ಸಂಗೀತ ಪರಿಷತ್, ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಛಾಯಾಗ್ರಾಹಕ ಸಂಘ, ಶ್ರೀ ಗಾಯತ್ರಿ ಪರಿವಾರ, ಸಮಾನ ಮನಸ್ಕರ ವೇದಿಕೆ, ಸೇರಿದಂತೆ ವಿವಿಧ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಶೆಣೈಯವರಿಗೆ ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.