ಬಂಟ್ವಾಳ: ಉಡುಪಿ ಜಿಲ್ಲೆಯ ಕಾಪುವಿನಲ್ಲಿ ರೂ ೯೯ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮಾರಿಕಾಂಬಾ ದೇವಸ್ಥಾನದಲ್ಲಿ ಮುಂದಿನ ಫೆ. ೨೫ರಿಂದ ಮಾರ್ಚ್ ೫ರ ತನಕ ಬ್ರಹ್ಮಕಲಶೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ‘ನವದುರ್ಗಾ ಲೇಖನ ಯಜ್ಞ ‘ ಮತ್ತು ನವಚಂಡಿಕಾ ಯಾಗವೂ ನಡೆಯಲಿದೆ ಎಂದು ಯಜ್ಞ ಸಮಿತಿ ಜಿಲ್ಲಾ ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ ಹೇಳಿದರು.
ಇಲ್ಲಿನ ಬಿ.ಸಿ.ರೋಡಿನಲ್ಲಿ ಶನಿವಾರ ನಡೆದ ಕಾಪು ಮಾರಿಗುಡಿ ನವದುರ್ಗಾ ಲೇಖನ ಯಜ್ಞ ಮಾಹಿತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಇದೇ ೨೯ರಂದು ನಡೆಯಲಿರುವ ವಾಗೀಶ್ವರಿ ಪೂಜೆ ದಿನ ಪುಸ್ತಕ ಪಡೆದು ಬಳಿಕ ೪೫ ದಿನಗಳ ಒಳಗೆ ಆ ಪುಸ್ತಕವನ್ನು ಕ್ಷೇತ್ರಕ್ಕೆ ತಲುಪಿಸಿಸಬೇಕು. ಫೆ.೪ ರಂದು ನಡೆಯಲಿರುವ ನವಚಂಡಿಯಾಗದಲ್ಲಿ ಭಕ್ತರು ಭಾಗವಹಿಸಬೇಕು ಎಂದರು.
ಒಟ್ಟು ೯೯,೯೯೯ ಮಂದಿ ಭಕ್ತರು ಒಟ್ಟು ಸೇರಿ ಒಂಭತ್ತು ದಿನಗಳಲ್ಲಿ ಪ್ರತಿದಿನ ೯ ಬಾರಿ ನದುರ್ಗೆಯರ ಹೆಸರು ಬರೆದು, ಕಾಪುವಿನ ಅಮ್ಮನ ಹೆಸರಿನೊಂದಿಗೆ ಮುಕ್ತಾಯ ಗೊಳಿಸುವುದು. ಒಂಭತ್ತು ದಿನ ನವದುರ್ಗೆಯರ ಲೇಖನ ಬರೆದು, ಕೊನೆ ಪುಟದಲ್ಲಿ ತಮ್ಮ ಹೆಸರು, ರಾಶಿ, ನಕ್ಷತ್ರ ಮತ್ತು ವಿಳಾಸ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ, ಒಂಭತ್ತನೇ ದಿನಕ್ಕೆ ಮುಕ್ತಾಯಗೊಳಿಸುವುದು. ಈ ಪುಸ್ತಕ ಮತ್ತು ತೆಗೆದಿಟ್ಟ ೯ ಮುಷ್ಠಿ ಅಕ್ಕಿ ಹಾಗೂ ಶಿಲಾಸೇವೆಯೊಂದಿಗೆ ಕಾಪುವಿನ ಅಮ್ಮನ ಸನ್ನಿಧಾನಕ್ಕೆ ಸಮರ್ಪಣೆ ಮಾಡಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಪ್ರಧಾನ ಸಂಚಾಲಕ ಪುರುಷೋತ್ತಮ ಭಂಡಾರಿ, ಸಂಚಾಲಕ ಮನೀಶ್ ರೈ, ಕೃಷ್ಣ ಶೆಟ್ಟಿ ತಾರೆಮಾರ್, ಅಶ್ವತ್ಥಾನ ಹೆಗ್ಡೆ, ಪ್ರದೀಪ್ ಆಳ್ವ, ಸಂತೋಷ್ ಶೆಟ್ಟಿ, ಅಶ್ವಿತ್ ಸುವರ್ಣ, ಬಾಲಕೃಷ್ಣ ಕೊಟ್ಟಾರಿ, ತಾರನಾಥ ಕೊಟ್ಟಾರಿ ಮತ್ತಿತರರು ಇದ್ದರು.
ಬಿ.ಸಿ.ರೋಡು: ಕಾಪು ಮಾರಿಗುಡಿ ನವದುರ್ಗಾ ಲೇಖನ ಯಜ್ಞ ಮಾಹಿತಿ ಸಮಿತಿ ಸಭೆ
RELATED ARTICLES