ಅಯ್ಯಪ್ಪ ಭಕ್ತರಿಗೆ ವಿಮಾನದಲ್ಲಿ ಇರುಮುಡಿ ಒಯ್ಯಲು ‘ಬಿಸಿಎಎಸ್ ಅನುಮತಿ

0
1

ನವದೆಹಲಿ: ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಯಾತ್ರೆ ಕೈಗೊಳ್ಳುವ ಭಕ್ತಾದಿಗಳಿಗೆ ತಮ್ಮ ವಿಮಾನದ ‘ಕ್ಯಾಬಿನ್ ಬ್ಯಾಗೇಜ್’ನಲ್ಲಿ ತೆಂಗಿನಕಾಯಿ ಕೊಂಡೊಯ್ಯಲು ವಿಮಾನಯಾನ ಭದ್ರತಾ ನಿಯಂತ್ರಕ ಸಂಸ್ಥೆಯಾದ ‘ಬಿಸಿಎಎಸ್ ಅನುಮತಿ ನೀಡಿದೆ. ಸಾಮಾನ್ಯವಾಗಿ ತೆಂಗಿನಕಾಯಿ ದಹನಶೀಲವಾಗಿದ್ದರಿಂದ ಅದನ್ನು ವಿಮಾನದೊಳಗಡೆ ಕ್ಯಾಬಿನ್ ಬ್ಯಾಗೇಜ್‌ನಲ್ಲಿ ಕೊಂಡೊಯ್ಯಲು ಬಿಡಲಾಗುವುದಿಲ್ಲ. ಆದರೆ ವಿಶೇಷವಾಗಿ ಶಬರಿಮಲೆ ಯಾತ್ರಾರ್ಥಿಗಳ ಇರುಮುಡಿ ಇರುವ ಬ್ಯಾಗೇಜ್ ಅನ್ನು ಎಕ್ಸರೇ ಸ್ಫೋಟಕ ಪತ್ತೆ ಪರೀಕ್ಷೆ ಹಾಗೂ ವಿಮಾನಯಾನ ಭದ್ರತಾ ಸಿಬ್ಬಂದಿ (ಎಎಸ್‌ಟಿ) ಸ್ವಯಂ ಪರೀಕ್ಷೆ ನಡೆಸಿರ ಬಳಿಕ ಅನುಮತಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತಿವರ್ಷವೂ ಶಬರಿಮಲೆಗೆ ಭೇಟಿ ನೀಡುವ ಲಕ್ಷಾಂತರ ಭಕ್ತಾದಿಗಳು ದೇವರಿಗೆ ಸಮರ್ಪಿಸಲು ತಮ್ಮೊಂದಿಗೆ ಇರುಮುಡಿ ಕಟ್ಟು (ತುಪ್ಪ ಹಾಗೂ ತೆಂಗಿನಕಾಯಿ ಇರುವ ಕಟ್ಟು) ಕೊಂಡೊಯ್ಯುತ್ತಾರೆ, ಈ ನಿಟ್ಟಿನಲ್ಲಿ ಜನವರಿವರೆಗೆ ನಡೆಯಲಿರುವ ಶಬರಿಮಲೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ನಿಗದಿತ ಅವಧಿಯವರೆಗೆ ಮಾತ್ರ ಈ ವಿಶೇಷ ವಿನಾಯಿತಿ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ

ಶಬರಿಮಲೆಗೆ ಕರ್ನಾಟಕದಿಂದ ವಿಶೇಷ ರೈಲು |

ಶಬರಿಮಲೆ ದೇಗುಲದಲ್ಲಿ ಮತ್ತೆ ಮಹಿಳೆಯರ ಪ್ರವೇಶ ವಿವಾದ ಇಂದಿನಿಂದ ಶಬರಿಮಲೆಯಲ್ಲಿ ದರ್ಶನ ಆರಂಭ ಭಕ್ತರಿಗಾಗಿ ಭರ್ಜರಿ ವ್ಯವಸ್ಥೆ

ಇರುಮುಡಿ ಹೊತ್ತು ಪಾದಯಾತ್ರೆ ಮೂಲಕ ಅಯ್ಯಪ್ಪನ ದರ್ಶನ ಪಡೆದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

LEAVE A REPLY

Please enter your comment!
Please enter your name here