Monday, March 17, 2025
HomeUncategorizedಮೌಲ್ಯಯುತರಾಗುವುದರೊಂದಿಗೆ ಸಮಾಜಮುಖಿಯಾಗಿ - ಪ್ರೊ.ಪಿ. ಎಲ್‌ ಧರ್ಮ

ಮೌಲ್ಯಯುತರಾಗುವುದರೊಂದಿಗೆ ಸಮಾಜಮುಖಿಯಾಗಿ – ಪ್ರೊ.ಪಿ. ಎಲ್‌ ಧರ್ಮ


 ರಾಮಕೃಷ್ಣ ಮಠದಲ್ಲಿ ಪ್ರಜ್ಞಾ ಶೈಕ್ಷಣಿಕ ವಿಚಾರ ಸಂಕಿರಣ ಸಂಪನ್ನ
 ಸುಮಾರು ೫೫೦ ವೃತ್ತಿಪರ ವಿದ್ಯಾರ್ಥಿಗಳು ಭಾಗಿ

“ಈ ನೆಲದಎಲ್ಲಾ ಸಂಪನ್ಮೂಲಗಳನ್ನು ರಕ್ಷಿಸುವುದುನಮ್ಮಆದ್ಯಕರ್ತವ್ಯ. ಇಂದಿನ ಸಮಾಜದಲ್ಲಿಉತ್ತಮ ಮೌಲ್ಯಗಳನ್ನು ಬಿತ್ತುವ ಕಾರ್ಯ ನಡೆಯಬೇಕಿದೆ. ಸ್ವಾರ್ಥಪರವಾಗಿರುವ ನಮ್ಮ ಆಲೋಚನೆಗಳಲ್ಲಿ ಬದಲಾವಣೆಗಳನ್ನು ತಂದು ಸಮಾಜಮುಖಿಯಾಗಬೇಕಾದ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ನಾವು ನಮ್ಮ ಜೀವನದಲ್ಲಿ ಕೆಲವು ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ. ಭಾರತ ಅತ್ಯಂತ ಹೆಚ್ಚು ಯುವಕರನ್ನು ಹೊಂದಿರುವ ದೇಶ. ಕೇವಲ ವಯಸ್ಸಿನಿಂದ ಅಲ್ಲ ಮನಸ್ಸಿನಿಂದ ಯುವಕರಾಗೋಣ. ಇದಕ್ಕೆ ಸ್ವಾಮಿ ವಿವೇಕಾನಂದರ ಚಿಂತನೆಗಳು ನಮಗೆ ಪ್ರೇರಣೆ ನೀಡಲಿ” ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮರವರು ಹೇಳಿದರು.
ಮಂಗಳೂರಿನ ರಾಮಕೃಷ್ಣ ಮಿಷನ್ ನಲ್ಲಿನಡೆದ ಪ್ರಜ್ಞಾ – ವೃತ್ತಿಪರ ವಿದ್ಯಾರ್ಥಿಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರಿನ ರಾಮಕೃಷ್ಣ ಮಿಷನ್‌ ಆಧುನಿಕ ಯುವ ಪೀಳಿಗೆಯಲ್ಲಿ ಜೀವನ ಮೌಲ್ಯಗಳನ್ನು ತುಂಬಲು ಈ ಮೌಲ್ಯಾಧಾರಿತ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ೧೮೯೩ ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣದ ಸ್ಮರಣಾರ್ಥ “ಶಿಕ್ಷಣ ಮತ್ತು ಮಾನವ ಶ್ರೇಷ್ಠತೆ” ಎಂಬ ಪರಿಕಲ್ಪನೆಯಲ್ಲಿ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿಜಿತಕಾಮಾನಂದಜಿ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ ಹಾಗೂ ಸಂವಾದ ನಡೆಯಿತು.ಕಾನ್ಪುರದ ರಾಮಕೃಷ್ಣ ಮಿಷನ್‌ ಆಶ್ರಮದ ಕಾರ್ಯದರ್ಶಿಗಳದ ಪೂಜ್ಯ ಸ್ವಾಮಿ ಆತ್ಮಶ್ರದ್ಧಾನಂದಜಿ ಮೊದಲ ಅವಧಿಯನ್ನು ನಡೆಸಿಕೊಟ್ಟರು. ಎರಡನೇ ಅವಧಿಯಲ್ಲಿ ಹೈದರಾಬಾದ್ ನ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ ಮತ್ತು ತಂತ್ರಜ್ಞರಾದ ಶ್ರೀ ಎಸ್.ಎನ್. ಶ್ರೀನಿವಾಸ್‌ರವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ನಂತರ “ಶಿಕ್ಷಣ ಮತ್ತು ಮಾನವ ಶ್ರೇಷ್ಠತೆ” ಎಂಬ ವಿಷಯದ ಕುರಿತಾಗಿ ನಡೆದ ಸಂವಾದದಲ್ಲಿ ಮಂಗಳೂರಿನ ಎಸ್.ಸಿ.ಎಸ್.ಆಸ್ಪತ್ರೆಯ ಗ್ಯಾಸ್ಟೋಎಂಟರಾಲಜಿಸ್ಟ್ಡಾ. ಚಂದ್ರಶೇಖರ್‌ಜೆ. ಸೊರಕೆಯವರು ಮತ್ತು ಮಂಗಳೂರಿನ ಪರಿಸರವಾದಿಗಳಾದ ಶ್ರೀ ಆರ್ಜುನ್ ಮಸ್ಕರೇನಸ್‌ರವರು ಭಾಗವಹಿಸಿದರು. ಭಾರತೀಯ ಸೇನೆಯ ನಿವೃತ್ತ ಯೋಧರಾದ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್ ಸ್ವಾಗತಿಸಿ, ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕರಾದ ರಂಜನ್ ಬೆಳ್ಳರ್ಪ್ಪಾಡಿ ವಂದಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES
- Advertisment -
Google search engine

Most Popular