ಮೂಡುಬಿದಿರೆ: ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಬೇಲಾಡಿ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಬ್ರಹ್ಮ ಬೈದರ್ಕಳ ಯುವ ಸೇವಾ ಸಮಿತಿಯಿಂದ ಪಂಚಕಜ್ಜಾಯ ಸೇವೆ ನಡೆಯಿತು. ಇದೇ ವೇಳೆ ದೈವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶ ನಡೆಸುವುದರ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು. ಆಗಮಿಸಿದ ಊರ, ಪರಊರ ಎಲ್ಲಾ ಭಕ್ತರಿಗೆ ಪಂಚಕಜ್ಜಾಯ ಪ್ರಸಾದ ವಿತರಿಸಲಾಯಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬ್ರಹ್ಮ ಬೈದರ್ಕಳ ಯುವ ಸೇವಾ ಸಮಿತಿಯ ಎಲ್ಲಾ ಸದಸ್ಯರು ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಬೇಲಾಡಿ ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೊದ್ಧಾರ, ಬ್ರಹ್ಮ ಕಲಶ ಕುರಿತು ಪೂರ್ವಭಾವಿ ಸಭೆ
RELATED ARTICLES