Saturday, December 14, 2024
HomeUncategorizedಬೆಳಗಾವಿ: ಯುವಕನ ಮೇಲೆ ಗುಂಡಿನ ದಾಳಿ

ಬೆಳಗಾವಿ: ಯುವಕನ ಮೇಲೆ ಗುಂಡಿನ ದಾಳಿ

ಬೆಳಗಾವಿ: ಆಸ್ಪತ್ರೆಯ ಬೆಡ್ ಮೇಲೆ ನರಳಾಡುತ್ತಿರುವ ಯುವಕ, ಆತನಿಂದ ಮಾಹಿತಿ ಪಡೆಯುತ್ತಿರುವ ಪೊಲೀಸರು. ಅದೊಂದು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಪೊಲೀಸ್ ಕಮಿಷನರ್ ಹಾಗೂ ತಂಡ. ಈ ಎಲ್ಲ ಘಟನಾವಳಿಗಳು ಕಂಡು ಬಂದಿದ್ದು ಬೆಳಗಾವಿಯ ಆಂಜನೇಯ ನಗರದಲ್ಲಿ. ಬುಧವಾರ ಸಂಜೆ ಟಿಳಕವಾಡಿಯ ದ್ವಾರಕಾನಗರದ ಪುಣಿತ್ ಕುಮಾರ್ (31 ವರ್ಷ) ಸ್ನೇಹಿತೆ ಸ್ಮಿತಾ ಮನೆಗೆ ಊಟಕ್ಕೆ ಹೋಗಿದ್ದಾನೆ. ಇನ್ನೇನು ಊಟ ಮಾಡಬೇಕು ಅಂದುಕೊಳ್ಳುವಷ್ಟರಲ್ಲಿ ಪುಣಿತ್ ಮಾಜಿ ಗರ್ಲ್ ಫ್ರೆಂಡ್ ಸ್ಮಿತಾಳ ಮನೆಗೆ ಬಂದಿದ್ದಾಳೆ. ಗಂಡ ಸತ್ತ ಸ್ಮಿತಾ ಒಬ್ಬಳೆ ಇದ್ದು ಆಕೆ ಮನೆಗೆ ಪಣಿತ್ ಯಾಕೆ ಬಂದಾ ಎಂದು ಅನುಮಾನಗೊಂಡು ಪ್ರಣಿತ್ ಜೊತೆಗೆ ಜಗಳಕ್ಕಿಳಿದಿದ್ದಾಳೆ. ಈ ವೇಳೆ ಸ್ಮಿತಾ ಎಂಟ್ರಿಯಾಗಿ ಇಬ್ಬರ ನಡುವಿನ ಜಗಳ ಬಗೆ ಹರಿಸುವ ಕೆಲಸ ಮಾಡಿದ್ದಾಳೆ. ಆದರೆ ಇದು ಇಷ್ಟಕ್ಕೆ ಮುಗಿದಿಲ್ಲ. ಮಾಜಿ ಪ್ರೇಯಸಿ ಹಿಂದೆ ಹಿಂದೆ ಮತ್ತೆ ಮೂರು ಜನ ಬಂದೇ ಬಿಟ್ಟಿದ್ದಾರೆ. ಪುಣಿತ್ ಮೇಲೆ ಹಲ್ಲೆ ಮಾಡಿ ಜೊತೆಗೆ ತಂದಿದ್ದ ಗನ್ ತೆಗೆದು ಶೂಟ್ ಮಾಡಿಯೇ ಬಿಟ್ಟಿದ್ದಾರೆ. ಗುಂಡಿನ ದಾಳಿಯಿಂದ ಪುಣಿತ್ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾನೆ. ಗುಂಡು ಹಣೆ ಭಾಗದಿಂದ ಕಿವಿ ಪಕ್ಕ ಹಾದುಗೋಗಿದೆ. ಇತ್ತ ಆರೋಪಿಗಳು ಮತ್ತೊಂದು ಬಾರಿ ಗುಂಡಿನ ದಾಳಿ ಮಾಡಿದ್ದು ಅದು ತೊಡೆಯ ಭಾಗಕ್ಕೆ ತಗುಲಿದೆ. ತಕ್ಷಣ ಕುಸಿದು ಪುಣಿತ್ ಕೆಳಗೆ ಬೀಳಿದ್ದಂತೆಯೇ ಮತ್ತೆ ಗುಂಡು ಹಾರಿಸಲು ನೋಡಿದ್ದಾರೆ. ಈ ವೇಳೆ ಫೈರ್ ಆಗಿಲ್ಲ. ತಕ್ಷಣ ನಾಲ್ಕು ಜನ ಆರೋಪಿಗಳು ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದ ಪಣಿತ್‌ನನ್ನು ಕೂಡಲೇ ಸ್ಮಿತಾ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಮಾಳಮಾರುತಿ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಗುಂಡಿನ ದಾಳಿ ವಿಚಾರ ಗೊತ್ತಾಗುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ಆಸ್ಪತ್ರೆಗೆ ಬಂದು ಹಲ್ಲೆಗೊಳಗಾದ ಪಣಿತ್‌ರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಪುಣಿತ್ ಆರೋಗ್ಯ ವಿಚಾರಿಸಿ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದರು. ಡಿಸಿಪಿ ರೋಹನ್ ಜಗದೀಶ್ ಕೂಡ ಸಾಥ್ ನೀಡಿದ್ದರು.
ಘಟನೆ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು,
ತನಿಖೆ ಚುರುಕುಗೊಳಿಸಿದ್ದಾರೆ. ಐಸಿಯುವಿನಲ್ಲಿ ಪ್ರಣಿತ್‌ಗೆ ಚಿಕಿತ್ಸೆ ಮುಂದುವರೆದಿದೆ.

RELATED ARTICLES
- Advertisment -
Google search engine

Most Popular