Monday, December 2, 2024
Homeಉಡುಪಿಬೆಳ್ಳರ್ಪಾಡಿ ಉಚಿತ ದಂತ ತಪಾಸನಾ ಶಿಬಿರ

ಬೆಳ್ಳರ್ಪಾಡಿ ಉಚಿತ ದಂತ ತಪಾಸನಾ ಶಿಬಿರ

ಮಣಿಪಾಲ ರೋಟರಿ ಕ್ಲಬ್ ಟೌನ್, ಮತ್ತು ಆರ್. ಸಿ. ಸಿ ಬೆಳ್ಳರಪಾಡಿ, ಡೆಂಟಲ್ ಕಾಲೇಜ್ ಮಣಿಪಾಲ್, ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಳ್ಳರಪಾಡಿ ಇವರ ಸಹಯೋಗದಲ್ಲಿ ದಂತ ಪರೀಕ್ಷೆ ತಪಾಸನಾ ಶಿಬಿರ ವನ್ನು ಏರ್ಪಡಿಸಲಾಗಿದ್ದು ಈ ಶಿಬಿರವನ್ನು ಇದೇ ಬರುವ ದಿನಾಂಕ 21ನೇ ಶನಿವಾರದಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳರ್ಪಾಡಿ ಇಲ್ಲಿ ನಡೆಸಲಾಗುವುದು. ಇದರ ಸಂಪೂರ್ಣ ಉಪಯೋಗವನ್ನು ಗ್ರಾಮಸ್ಥರು ಹಾಗೂ ಶಾಲೆಯ ಮಕ್ಕಳು ಪಡೆದುಕೊಳ್ಳ ಬಹುದು. ಮನುಷ್ಯನಿಗೆ ಹಲ್ಲುಗಳು ಅವನ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮುಖ್ಯವಾಗಿದೆ ಹಾಗಾಗಿ ಹಲ್ಲಿನ ಸಮಸ್ಯೆ ಇರುವವರು 21ನೇ ತಾರೀಕು ಶನಿವಾರದಂದು ನಡೆಯುವ ದಂತ ತಪಾಸನಾ ಶಿಬಿರಕ್ಕೆ ಬಂದು ಈ ಶಿಬಿರದ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳಬಹುದು. ನಿಮ್ಮ ಪೂರ್ತಿ ಸಹಕಾರವನ್ನು ಕೊಟ್ಟು. ಈ ಶಿಬಿರದಲ್ಲಿ ಭಾಗವಹಿಸಿ ದಂತ ತಪಾಸನಾ ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿ ನಿಮ್ಮಲ್ಲಿ ವಿನಂತಿಸುತ್ತ ಈ ಶಿಬಿರದಲ್ಲಿ ಭಾಗವಹಿಸಿ ಹಲ್ಲಿಗೆ ಸಂಬಂಧ ಪಟ್ಟ ಚಿಕಿತ್ಸೆಯನ್ನು ಪಡೆದವರಿಗೆ. ಹಲ್ಲಿಗೆ ಸಂಬಂಧಪಟ್ಟ ಚಿಕಿತ್ಸೆಯನ್ನು ಒಂದು ತಿಂಗಳ ಒಳಗೆ ಫ್ರೀಯಾಗಿ ಮಣಿಪಾಲ ಕೆಎಂಸಿ ಡೆಂಟಲ್ ಕಾಲೇಜಿನಲ್ಲಿ ಮಾಡಿಕೊಳ್ಳಲಾಗುವುದು. ಊರಿನ ಗ್ರಾಮಸ್ಥರು, ಶಾಲಾ ಮಕ್ಕಳು ಹಾಗೂ ಹಲ್ಲಿನ ತೊಂದರೆ ಇದ್ದವರು ಈ ದಂತ ತಪಾಸನಾ ಶಿಬಿರದಲ್ಲಿ ಭಾಗವಹಿಸಿ ಇದರ ಸಂಪೂರ್ಣ ಉಪಯೋಗವನ್ನು ಪಡೆಯಬಹುದು.

ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಹಾಗೂ ಸರ್ವ ಸದಸ್ಯರು ಮಣಿಪಾಲ ರೋಟರಿ ಟೌನ್ ಹಾಗೂ ಆರ್. ಸಿ .ಸಿ ಬೆಳ್ಳರ್ಪಾಡಿ

RELATED ARTICLES
- Advertisment -
Google search engine

Most Popular