Monday, May 19, 2025
Homeಬೆಳ್ತಂಗಡಿಬೆಳ್ತಂಗಡಿ: ಹರಿದ ಜೀನ್ಸ್‌ಗೆ ಬೀದಿಯಲ್ಲೇ ಹೊಲಿಗೆ - ಲೇವಡಿಯಿಂದ ಮನನೊಂದು ಯುವಕ ಆತ್ಮಹತ್ಯೆಗೆ ಯತ್ನ..!

ಬೆಳ್ತಂಗಡಿ: ಹರಿದ ಜೀನ್ಸ್‌ಗೆ ಬೀದಿಯಲ್ಲೇ ಹೊಲಿಗೆ – ಲೇವಡಿಯಿಂದ ಮನನೊಂದು ಯುವಕ ಆತ್ಮಹತ್ಯೆಗೆ ಯತ್ನ..!


ಬೆಳ್ತಂಗಡಿ: ಯುವಕನೊಬ್ಬ ಫ್ಯಾಷನ್‌ ಎಂದು ಹರಿದ ಜೀನ್ಸ್‌ ಅನ್ನು ಹಾಕಿದ್ದಕ್ಕೆ ಆತನ ಸ್ನೇಹಿತರು ಗೇಲಿ ಮಾಡಿ, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದರಿಂದ ಮನನೊಂದ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಪಣಕಜೆ ನಿವಾಸಿ ಮೊಹಮ್ಮದ್‌ ಹಾಯಿಫ್‌ ಅವರ ಪುತ್ರ ಶಾಹಿಲ್‌ (21) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಆತ ಗುರುವಾರ ವಿನೂತನ ಶೈಲಿಯ ಹರಿದ ಜೀನ್ಸ್‌ ಪ್ಯಾಂಟ್‌ ಹಾಕಿಕೊಂಡು ಬೆಳ್ತಂಗಡಿ ಸಂತೆಕಟ್ಟೆ ಮಾರುಕಟ್ಟೆಗೆ ಬಂದಾಗ ಆತನ ಮೂವರು ಸ್ನೇಹಿತರು ತಮಾಷೆ ಮಾಡಿದ್ದಾರೆ. ಆತನನ್ನು ತಡೆದು, ಎರಡೂ ಕೈಗಳನ್ನು ಬಲವಂತವಾಗಿ ಹಿಡಿದು, ಗೋಣಿಚೀಲ ಹೊಲಿಯುವ ಸೂಜಿಯಿಂದ ಹರಿದ ಪ್ಯಾಂಟ್‌ ಅನ್ನು ಹೊಲಿದಿದ್ದಾರೆ. ಇಷ್ಟಲ್ಲದೇ ಅದರ ವಿಡಿಯೋವನ್ನು ಕೂಡಾ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಯುವಕ ಮನನೊಂದು ಸಂಜೆ ವೇಳೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಆತನ ಪೋಷಕರು ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಯುವಕನ ಸ್ಥಿತಿ ಚಿಂತಾಜನಕವಾಗಿದೆ. ದುಷ್ಕೃತ್ಯ ಎಸಗಿದ ಶಬೀರ್‌, ಅನೀಶ್‌ ಹಾಗೂ ಸಲೀಂ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular