Saturday, December 14, 2024
Homeಬೆಳ್ತಂಗಡಿಬೆಳ್ತಂಗಡಿ | ವೃದ್ಧನ ಕೈಯಿಂದ ಎಟಿಎಂ ಕಾರ್ಡ್‌ ಎಗರಿಸಿ ಹಣ ಡ್ರಾ ಮಾಡಿದ ಅಪರಿಚಿತರು

ಬೆಳ್ತಂಗಡಿ | ವೃದ್ಧನ ಕೈಯಿಂದ ಎಟಿಎಂ ಕಾರ್ಡ್‌ ಎಗರಿಸಿ ಹಣ ಡ್ರಾ ಮಾಡಿದ ಅಪರಿಚಿತರು

ಬೆಳ್ತಂಗಡಿ: ಎಟಿಎಂ ಕೇಂದ್ರದಲ್ಲಿ ಹಣ ತೆಗೆಯುತ್ತಿದ್ದ ವೃದ್ಧನ ಕೈಯಿಂದ ಎಟಿಎಂ ಕಾರ್ಡ್‌ ಎಗರಿಸಿಕೊಂಡು, ಅವರ ಬ್ಯಾಂಕ್‌ ಖಾತೆಯಲ್ಲಿದ್ದ ಹಣವನ್ನೆಲ್ಲಾ ಡ್ರಾ ಮಾಡಿಕೊಂಡು ದೋಚಿದ ಘಟನೆ ತಾಲೂಕಿನ ಗೇರುಕಟ್ಟೆಯಲ್ಲಿ ನಡೆದಿದೆ. ಗೇರುಕಟ್ಟೆ ನಿವಾಸಿ ಅಬೂಬಕ್ಕರ್‌ (71) ಹಣ ಕಳೆದುಕೊಂಡ ವ್ಯಕ್ತಿ. ಅಬೂಬಕ್ಕರ್‌ ಅವರು ಗೇರುಕಟ್ಟೆ ಕೆನರಾ ಬ್ಯಾಂಕಿನ ಎಟಿಎಂನಲ್ಲಿ ಅ.2ರಂದು ಹಣ ತೆಗೆಯಲೆಂದು ಹೋಗಿದ್ದು, ಈ ಸಂದರ್ಭ ಇಬ್ಬರು ಅಪರಿಚಿತ ವ್ಯಕ್ತಿಗಳು ಎಟಿಎಂ ಒಳಗೆ ಬಂದು ಅವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ. ಅಬೂಬಕ್ಕರ್‌ ಅವರು ಸಹಾಯದ ಅಗತ್ಯವಿಲ್ಲ ಎಂದರೂ ಅಪರಿಚಿತರು ಅಲ್ಲಿ ಅವರೊಂದಿಗೆ ಇದ್ದರು. ಇದಾದ ಎರಡು ದಿನಗಳ ಬಳಿಕ ಅಬೂಬಕ್ಕರ್‌ ಮತ್ತೆ ಎಟಿಎಂಗೆ ಹೋದಾಗ ಎಟಿಎಂ ಕಾರ್ಡ್‌ ಕೆಲಸ ಮಾಡದಿರುವುದು ಕಂಡುಬಂದಿದೆ. ಬ್ಯಾಂಕಿನಲ್ಲಿ ವಿಚಾರಿಸಿದಾಗ ಖಾತೆಯಲ್ಲಿದ್ದ 49,200 ರೂ. ಎಟಿಎಂ ಕಾರ್ಡ್‌ ಬಳಸಿ ತೆಗೆದಿರುವುದು ಕಂಡುಬಂದಿದೆ.
ಅಪರಿಚಿತರು ಅ.2ರಂದು ಎಟಿಎಂ ಕೇಂದ್ರದಲ್ಲಿ ಅಬೂಬಕ್ಕರ್‌ ಅವರಿಂದ ಎಟಿಎಂ ಕಾರ್ಡ್‌ ಅಪಹರಿಸಿ ಯಾವುದೋ ಹಳೆಯ ಕಾರ್ಡನ್ನು ಅವರಿಗೆ ನೀಡಿದ್ದರು. ಬಳಿಕ ಕಾರ್ಡನ್ನು ಉಪಯೋಗಿಸಿ ಹಣ ಕಬಳಿಸಿದ್ದರು. ಇದೀಗ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular