Tuesday, March 18, 2025
Homeಮೂಡುಬಿದಿರೆಬೆಳುವಾಯಿ: ಎ.07ರಂದು ಹಳ್ಳಿ ಕ್ರೀಡೋತ್ಸವ-2024

ಬೆಳುವಾಯಿ: ಎ.07ರಂದು ಹಳ್ಳಿ ಕ್ರೀಡೋತ್ಸವ-2024

ಬೆಳುವಾಯಿ: ಶ್ರೀ ಧರ್ಮರಸು , ಶ್ರೀ ಕುಕ್ಕಿನಂತ್ತಾಯಿ, ಶ್ರೀ ಕೊಡಮಣಿತ್ತಾಯಿ ದೈವಸ್ಥಾನ, ಶ್ರೀ ಬ್ರಹ್ಮ ಬೈದರ್ಕಳ, ಶ್ರೀ ಮಾಯಾಂದಾಲೆ ಗರಡಿ ಶ್ರೀ ಕ್ಷೇತ್ರ ನಡ್ಯೋಡಿ, ತಾ. 07.04.2024 ನೇ ಆದಿತ್ಯವಾರ ನಡ್ಯೋಡಿ ಗರಡಿಯ ಪಕ್ಕದ ಗದ್ದೆಯಲ್ಲಿ ಬೆಳಿಗ್ಗೆ 8.00 ಗಂಟೆಯಿಂದ ವಿವಿಧ ಮನೋರಂಜನಾ ಆಟಗಳು ನಡೆಯಲಿದೆ. ಸಣ್ಣ ಮಕ್ಕಳ ವಿಭಾಗದಲ್ಲಿ (5 ನೇ ತರಗತಿವರೆಗೆ) ಗೋಣಿ ಚೀಲ ಓಟ, ಲಿಂಬೆ ಚಮಚ ಓಟ ಮತ್ತು ಬಾಸ್ಕೆಟ್ ಬಾಲ್ (ಬಾಸ್ಕೆಟ್ ಗೆ ಬಾಲ್ ಏಸೆಯುದು). ಮಕ್ಕಳ ವಿಭಾಗದಲ್ಲಿ ( 6 ರಿಂದ 10 ನೇ ತರಗತಿವರೆಗೆ) ಗೋಣಿಚೀಲ ಓಟ, ಮಡಿಕೆ ಒಡೆಯುದು ಮತ್ತು ಲಗೋರಿ ಹಾಗೂ ದೊಡ್ಡವರ ವಿಭಾಗದಲ್ಲಿ ಲಗೋರಿ, ಕೊತ್ತಲಿಗೆ ಕ್ರಿಕೆಟ್ ನಿಧಿ ಅನ್ವೇಷಣೆ (treasure hunt) ಹಗ್ಗಜಗ್ಗಾಟ ( ಗಂಡಸರಿಗೆ – ಹೆಂಗಸರಿಗೆ ಪ್ರತ್ಯೇಕ) ತೆಂಗಿನ ಗರಿ ಹೆಣೆಯುವುದು(ಮಡಲ್ ಮುಡೆಯುವುದು) ತೆಂಗಿನಗರಿಯಿಂದ ಹಿಡಿಸೂಡಿ ತಯಾರಿಸುವುದು ಹಾಗೂ ಇನ್ನಿತರ ಮನೋರಂಜನಾತ್ಮಕ ಆಟಗಳು ಜರಗಲಿರುವುದು.

ವಿಶೇಷ ಸೂಚನೆ: ಎಲ್ಲಾ ಕ್ರೀಡೆಗಳಿಗೆ ಸ್ಥಳದಲ್ಲೇ ನೋಂದಾವಣೆ ಮಾಡಲಾಗುತ್ತದೆ. ಗುಂಪು ಕ್ರೀಡೆಗಳಿಗೆ ತಂಡವನ್ನು ಸ್ಥಳದಲ್ಲೇ ರಚಿಸಲಾಗುತ್ತದೆ. ಮಧ್ಯಾಹ್ನ ಗಂಜಿ ಊಟದ ವ್ಯವಸ್ಥೆ ಇರುತ್ತದೆ.

RELATED ARTICLES
- Advertisment -
Google search engine

Most Popular