Tuesday, March 18, 2025
Homeನಿಧನಬೆಂಗಳೂರು : ಹಾವು ಕಚ್ಚಿ 7 ವರ್ಷದ ಮಗು ಸಾವು

ಬೆಂಗಳೂರು : ಹಾವು ಕಚ್ಚಿ 7 ವರ್ಷದ ಮಗು ಸಾವು

ಬೆಂಗಳೂರು : ಹಾವು ಕಚ್ಚಿ ಮಗುವೊಂದು ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ದೊಡ್ಡಬಳ್ಳಾಪುರ ತಾಲ್ಲೂಕಿನ ‌ಕೋಳೂರು ಗ್ರಾಮದಲ್ಲಿ ನಡೆದಿದೆ. ಟಿ ಹೊಸಹಳ್ಳಿ ಗ್ರಾಮದ ಅನುಷಾ ( 7 ) ಮೃತ ಮಗು. ಇನ್ನು ಕೋಳೂರು ಗ್ರಾಮದ ತೋಟದ ಮನೆಯಲ್ಲಿ ಈ ಕುಟುಂಬ ಕೂಲಿ ಕೆಲಸ ಮಾಡಿಕೊಂಡಿತ್ತು. ಎಂದಿನಂತೆ ತಂದೆ-ತಾಯಿ‌ ತೋಟದಲ್ಲಿ ಕೇಲಸ ಮಾಡುವ ವೇಳೆ ಆಟವಾಡುತ್ತಿದ್ದ ಮಗುವಿಗೆ ಹಾವು ಕಚ್ಚಿದೆ.

ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವು

ಈ ವೇಳೆ ಮಗು ಅಸ್ವಸ್ಥಗೊಂಡಿದ್ದನ್ನ ಕಂಡ ಕುಟುಂಬಸ್ಥರು ಕೂಡಲೇ ದೊಡ್ಡಬಳ್ಳಾಪುರ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES
- Advertisment -
Google search engine

Most Popular