Wednesday, February 19, 2025
Homeಬೆಂಗಳೂರುಬೆಂಗಳೂರು: ವಾಕಿಂಗ್​ ಮಾಡುತ್ತಿದ್ದ ಮಹಿಳೆ ಮೇಲೆ ಮಾನಸಿಕ ಅಸ್ವಸ್ಥನಿಂದ ಹಲ್ಲೆ

ಬೆಂಗಳೂರು: ವಾಕಿಂಗ್​ ಮಾಡುತ್ತಿದ್ದ ಮಹಿಳೆ ಮೇಲೆ ಮಾನಸಿಕ ಅಸ್ವಸ್ಥನಿಂದ ಹಲ್ಲೆ

ಬೆಂಗಳೂರು: ವಾಕಿಂಗ್​ ಮಾಡುತ್ತಿದ್ದ ಮಹಿಳೆ ಮೇಲೆ ಮಾನಸಿಕ ಅಸ್ವಸ್ಥನಿಂದ ಹಲ್ಲೆ ಮಾಡಿರುವಂತಹ ಘಟನೆ  ಬೆಂಗಳೂರಿನ ಸದಾಶಿವನಗರ ಠಾಣಾ ವ್ಯಾಪ್ತಿ 8ನೇ ಕ್ರಾಸ್​ನಲ್ಲಿ ನಡೆದಿದೆ. ವ್ಯಕ್ತಿಯನ್ನು ಹಿಡಿದು ಸದಾಶಿವನಗರ ಪೊಲೀಸರಿಗೆ ಸ್ಥಳೀಯರು ಒಪ್ಪಿಸಿದ್ದಾರೆ. ಸದ್ಯ ಆರೋಪಿ ಮಲ್ಲಿಕಾರ್ಜುನಗೆ ಕೋರ್ಟ್​​ ನ್ಯಾಯಾಂಗ ಬಂಧನ ವಿಧಿಸಿದೆ.

ನಿನ್ನೆ ಸಂಜೆ ಮನೆ ಮುಂಭಾಗ ಪಾರ್ಕ್​​ ಬಳಿ ಮಹಿಳೆ ವಾಕಿಂಗ್​​ ಮಾಡುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಬಿದ್ದಿದ್ದ ದೊಣ್ಣೆಯಿಂದ ಮಹಿಳೆ ತಲೆಗೆ ಬಲವಾಗಿ ಹೊಡೆಯಲಾಗಿದೆ. ಮಹಿಳೆ ಚೀರಾಟ ಕೇಳಿ ವ್ಯಕ್ತಿಗೆ ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ ಕೂಡಾ ಇದೇ ರೀತಿ ಓರ್ವ ವ್ಯಕ್ತಿಗೆ ಮಲ್ಲಿಕಾರ್ಜುನ ಹೊಡೆದಿದ್ದ. ಆದರೆ ನ್ಯಾಯಾಲಯದಿಂದ ಮಲ್ಲಿಕಾರ್ಜುನ ಜಾಮೀನು ಪಡೆದಿದ್ದ.

RELATED ARTICLES
- Advertisment -
Google search engine

Most Popular