
ಪಿಂಗಾರ ತುಳು ಲಿಪಿ ತಂತ್ರಾಂಶ ಬಿಡುಗಡೆ – ಬಲೆ ತುಲು ಲಿಪಿ ಕಲ್ಪುಗ ಕಲಿಕಾ ಕಾರ್ಯಗಾರ
ಬೆಂಗಳೂರು : : ಸೌಂದರ್ಯ ಎಜ್ಯುಕೇಶನಲ್ ಟ್ರಸ್ಟ್(ರಿ.) ಇವರ ಸಹಕಾರದಲ್ಲಿ,ಕರ್ನಾಟಕ ಕರಾವಳಿ ಮಿತ್ರ ಮಂಡಲಿ(ರಿ.) ಇವರ ಸಹಭಾಗಿತ್ವದೊಂದಿಗೆ,ಜೈ ತುಲುನಾಡ್(ರಿ.) ಇವರ ಆಶ್ರಯದಲ್ಲಿ ಇಲ್ಲಿನ,ನಾಗಸಂದ್ರ ಹತ್ತಿರ ಇರುವ ಹಾವನೂರು ಬಡಾವಣೆಯ ಸೌಂದರ್ಯ ಶಾಲೆಯ ಸಭಾಂಗಣದಲ್ಲಿ
ಜೈ ತುಲುನಾಡ್ ಸಂಘಟನೆಯ ಹರ್ಷಿತ್ ಕುಮಾರ್ ಅಭಿವೃದ್ದಿ ಪಡಿಸಿದ ಪಿಂಗಾರ ತುಲು ಲಿಪಿ ತಂತ್ರಾಂಶ ಬಿಡುಗಡೆ ಹಾಗೂ ಬಲೆ ತುಲು ಲಿಪಿ ಕಲ್ಪುಗ ಎನ್ನುವ ಕಾರ್ಯಕ್ರಮ ಜರುಗಿತು.

ಕರ್ನಾಟಕ ಕರಾವಳಿ ಮಿತ್ರ ಮಂಡಲಿಯ ಗೌರವಧ್ಯಕ್ಷರಾದ ಕೃಷ್ಣ ಕೆ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜೈ ತುಲುನಾಡ್(ರಿ.) ಸಂಘಟನೆಯ ತುಲು ಭಾಷಾ ಸಮಿತಿಯ ಮೇಲ್ವಿಚಾರಕರಾದ ಜಯಪ್ರಸಾದ್ ಮಾತನಾಡಿ ಜೈ ತುಲುನಾಡ್ ಸಂಘಟನೆ ಮಾಡಿದ ತುಳು ಪರ ಕೆಲಸಗಳ ಬಗ್ಗೆ ಪ್ರಸ್ತಾವಿಕವಾಗಿ ತಿಳಿಸಿದರು.ತುಲುವು ಅತೀ ಪ್ರಾಚೀನ ಭಾಷೆ ಅದಕ್ಕೆ ಸರಿಯಾದ ಪೋಷಣೆ ಮತ್ತು ಅಧ್ಯಯನಕ್ಕಾಗಿ ಸರಕಾರದ ಸಹಾಯದೊಂದಿಗೆ,ತುಲುವರು ಕೂಡ ಜಾಗೃತಿಯಾಗಬೇಕಾಗಿದೆ ಎಂದರು.
ಕರ್ನಾಟಕ ಕರಾವಳಿ ಮಿತ್ರ ಮಂಡಲಿಯ ಅಧ್ಯಕ್ಷರಾದ ರವಿಪ್ರಸಾದ್ ಶೆಟ್ಟಿ ಮಾತನಾಡಿ, ತುಳು ಭಾಷೆಯ ಬಗೆಗಿನ ತುಲುವರ ಉದಾಸೀನತೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದರು,ಮತ್ತು ಜೈ ತುಲುನಾಡ್ ಸಂಘಟನೆಯ ತುಳು ಹೋರಾಟದಲ್ಲಿ ಇನ್ನು ಮುಂದೆ ನಾವು ಕೂಡ ಬೆನ್ನುಲುಬಾಗಿ ನಿಲ್ಲುತ್ತೇವೆ ಎಂದರು.ತುಳುವಿಗೆ ಸ್ಥಾನಮಾನ ಸಿಗದಿರಲು ತುಳುವರೇ ಕಾರಣ ಎಂದರು.
ಹರ್ಷಿತ್ ಕುಮಾರ್ ಅಭಿವೃದ್ಧಿ ಪಡಿಸಿದ ಪಿಂಗಾರ ತುಳು ಲಿಪಿ ತಂತ್ರಾಂಶದ ಬಗ್ಗೆ ಮಾಹಿತಿ ನೀಡಿದ ಜೈ ತುಲುನಾಡ್(ರಿ.) ಸಂಘಟನೆಯ ತಾಂತ್ರಿಕ ವಿಭಾಗ ಮುಖ್ಯಸ್ಥರು ಮತ್ತು ಸಂಸ್ಥಾಪಕ ಸಮಿತಿಯ ಸದಸ್ಯರಾದಂತಹ ಸುಮಂತ್ ಪೂಜಾರಿ ಹೆಬ್ರಿ ಪಿಂಗಾರ ತುಳು ಫಾಂಟ್ ಕೀಲಿಮನೆಯನ್ನು ಹೇಗೆ ಬಳಸಬಹುದು ಎನ್ನುವುದರ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಸೌಂದರ್ಯ ವಿದ್ಯಾಸಂಸ್ಥೆಯ C.E.O ಆದಂತಹ ಮಾನ್ಯ ಶ್ರೀ ಕೀರ್ತನ್ M ಸೌಂದರ್ಯ ಇವರು ಜೈ ತುಲುನಾಡ್(ರಿ.) ಸಂಘಟನೆ ಭಾರಿ ಪ್ರಾಮಾಣಿಕವಾಗಿ ತುಳು ಭಾಷೆ ಮತ್ತು ಲಿಪಿಯ ಕೆಲಸವನ್ನು ಮಾಡುತ್ತಿದೆ.ಕೆಲವಷ್ಟು ಮಾಹಿತಿಗಳು ಈ ಕಾರ್ಯಕ್ರಮದಿಂದ ನಮಗೆ ಸಿಕ್ಕಿದಂತಾಗಿದೆ.ಇದು ನಿಜವಾಗಿಯೂ ಶ್ಲಾಘನೀಯ ಕೆಲಸ ಎಂದರು.ಮಾತ್ರವಲ್ಲದೆ ಸೌಂದರ್ಯ ವಿದ್ಯಾಸಂಸ್ಥೆಯಲ್ಲಿ ತುಳು ಭಾಷೆಯ ಬಗೆಗಿನ ಹೆಚ್ಚಿನ ಅಧ್ಯಯನಕ್ಕಾಗಿ ತುಳು ಅಧ್ಯಯ ಕೇಂದ್ರ ಸ್ಥಾಪಿಸುವ ಘೋಷಣೆಯನ್ನು ಮಾಡಿದರು.ಮತ್ತು ಇದರ ಬಗೆಗಿನ ಮುಂದಿನ ಕೆಲಸಗಳ ಬಗ್ಗೆ ಆದಷ್ಟು ಬೇಗ ತಿಳಿಸುವುದಾಗಿ ಹಾಗೂ ತುಳು ಜನಪದ ವಿದ್ವಾಂಸರು ಮತ್ತು ತಾಂತ್ರಿಕ ವಲಯದ ತಜ್ಞರ ಸಹಕಾರ ಬೇಕಾಗಿದೆ ಎಂದರು.
ಸಂಸ್ಥೆಯ ಇನ್ನೋರ್ವ ಮುಖ್ಯಸ್ಥರಾದ ಮಾನ್ಯ ಶ್ರೀಮತಿ ಸುನೀತ ಇವರು ಬಲೆ ತುಲು ಲಿಪಿ ಕಲ್ಪುಗ ಕಾರ್ಯಗಾರವನ್ನು ತುಲು ಲಿಪಿಯಲ್ಲಿ ಓಂಕಾರ ಬರೆಯುವ ಮೂಲಕ ಉದ್ಘಾಟಿಸಿದರು.ವಿದ್ಯಾ ಸಂಸ್ಥೆಯ ಇತರ ಮುಖ್ಯಸ್ಥರಾದ ವರುಣ್ ಕುಮಾರ್ M ಸೌಂದರ್ಯ ಹಾಗೂ ಶ್ರೀಮತಿ ನಿಶ್ಮಿತ ವರುಣ್ ಕುಮಾರ್ ಇವರ ಉಪಸ್ಥಿತಿಯನ್ನು ಗೌರವಿಸಲಾಯಿತು.
ತುಳುನಾಡ ಜವನೆರ್(ರಿ.) ಬೆಂಗಳೂರು ಸಂಘಟನೆಯ ಮುಖಂಡರಾದ ರಂಜಿತ್ ಇರಾ ಇವರು,ಜೈ ತುಳುನಾಡು(ರಿ.) ಸಂಘಟನೆ ಮತ್ತು ತುಲುನಾಡ ಜವನೆರ್ ಬೆಂಗಳೂರು ಸಂಘಟನೆ(ರಿ.) ಈ ಮುಂದೆಯೂ ಒಟ್ಟಾಗಿ ತುಲುವಿಗಾಗಿ ಹೋರಾಟ ಮಾಡಿದ್ದೆವು,ಇನ್ನು ಮುಂದೆಯೂ ಒಟ್ಟಾಗಿ ಇರುತ್ತೇವೆ ಎನ್ನುವ ಮೂಲಕ ಸಂಘಟನೆಯ ಕೆಲಸಕ್ಕೆ ಈ ಮೂಲಕ ಶುಭಾಶಯ ತಿಳಿಸಿದರು.
ಅಮೇರಿಕದ ಪ್ರಜೆಯಾದಂತ ಸಾಮ್ಯುಲ್ ಡ್ರಾಗೊಮಿರೆ ಇವರು ತುಲು ಭಾಷೆಯಲ್ಲಿ ಮಾತನಾಡಿದರು,ಮತ್ತು ನನಗೆ ತುಳು ಭಾಷೆ ತುಂಬಾ ಇಷ್ಟ ಎಂದರು.ಇವರ ಜೊತೆ ಬ್ರೆಜಿಲ್ ದೇಶದ ಲುವಾನ್ ಇವರು ಕೂಡ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದರು.
ಶಿಕ್ಷಕರಾಗಿ ಪ್ರಗತಿ ಯಸ್,ರಂಜನ್ S.Y,ಅನುದೀಪು ಶೆಟ್ಟಿ ಇವರುಗಳು ತುಳು ಲಿಪಿಯನ್ನು ಕಲಿಸಿದರು.
ಜೈ ತುಳುನಾಡ್(ರಿ.) ಸಂಘಟನೆ ಬೆಂಗಳೂರು ವಿಭಾಗದ ಅಧ್ಯಕ್ಷರು ಧನಂಜಯ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಅಕ್ಷತ ಸಾಲಿಯನ್ ಕಾರ್ಯಕ್ರಮದ ಅಥಿತಿಗಳನ್ನು ಸ್ವಾಗತಿಸಿದರು,ಅಕ್ಷಯ್ ಆಚಾರ್ಯ ಧನ್ಯವಾದ ಸಮರ್ಪಿಸಿದರು.ಶ್ರೀಮತಿ ಗೀತಾ ಜಯಪ್ರಸಾದ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.