ಬೆಂಗ್ರೆ ಕಸಬಾದಲ್ಲಿ ಪಂಚ ಗ್ಯಾರಂಟಿ ಯೋಜನೆಯಗಳ ವಿಲೇವಾರಿ ಶಿಬಿರವನ್ನು ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾ ಉದ್ಘಾಟಿಸಿ ಮಾತನಾಡಿದರು. ಈ ಶಿಬಿರದಲ್ಲಿ ಮಾತನಾಡುತ್ತಾ ಗ್ಯಾರಂಟಿ ಯೋಜನೆಗಳು ಬಹಳಷ್ಟು ಜನರಿಗೆ ತಮ್ಮ ಜೀವನದಲ್ಲಿ ನೆಮ್ಮದಿಯನ್ನು ತಂದುಕೊಟ್ಟಿದೆ ಮಾತ್ರವಲ್ಲದೇ ಜನರ ಜೀವನದಲ್ಲಿ ಸಂತಸವನ್ನು ಮೂಡಿಸಿದೆ. ಈ ಯೋಜನೆಗಳ ಮುಖಾಂತರ ಎಲ್ಲಾ ಜನರು ಈ ಯೋಜನೆಯ ಪ್ರಯೋಜನವನ್ನು ಪಡೆಯುವ ಮೂಲಕ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುವಂತಾಗಿದೆ ಎಂದು ನುಡಿದರು
ಸುಮಾರು 2000ಕೋಟಿ ರೂಪಾಯಿ.ಗೂ ಅಧಿಕ ಮೊತ್ತ ದ.ಕ. ಜಿಲ್ಲೆಯಲ್ಲಿ ಇವತ್ತು ರಾಜ್ಯ ಸರ್ಕಾರ ವಿನಿಯೋಗ ಮಾಡಿದೆ. ಪ್ರತಿ ತಾಲೂಕುಗಳಲ್ಲಿ 200ಕೋಟಿಗಿಂತಲೂ ಹೆಚ್ಚು ಮೊತ್ತವನ್ನು ವಿನಿಯೋಗಿಸಿದೆ. ಇದರಿಂದ ಜನರಿಗೆ ಬಾಳಿನಲ್ಲಿ ಸಂತಸವನ್ನು ಮೂಡಿಸಿದೆ ಮಾತ್ರವಲ್ಲದೇ ಅರ್ಥಿಕವಾಗಿ ಸಬಲತೆಯ್ನು ಮಾಡಿದೆ ಎಂದು ಐವನ್ ಡಿʼಸೋಜಾ ತಿಳಿಸಿದರು.
ಯಾರಿಗೆ ಈ ಯೋಜನೆಯ ಪ್ರಯೋಜನ ದೊರಕಿರುವುದಿಲ್ಲ ಅಂತವರಿಗೆ ಪಂಚ ಗ್ಯಾರಂಟಿ ಶಿಬಿರದ ಮೂಲಕ ಸಮಿತಿಯನ್ನು ಮಾಡಿ ಸಿಗದೇ ಇರುವವರನ್ನು ಕರೆಯಿಸಿ ಅವರ ದಾಖಲೆಗಳನ್ನು ಸರಿಪಡಿಸಿ ಯೋಜನೆಯನ್ನು ಮುಟ್ಟುವಂತೆ ಮಾಡುತ್ತಿರುವುದು ಮಾನ್ಯ ಮುಖ್ಯಮಂತ್ರಿಯವರು ಸಿದ್ದಾರಾಮಯ್ಯನವರ ಸರಕಾರದ ಪ್ರಮುಖ ಕೆಲಸ ಎಂದು ಐವನ್ ಡಿʼಸೋಜಾ ಈ ಸಂದರ್ಭದಲ್ಲಿ ತಿಳಿಸಿದರು. ಈ ಸಮಾರಂಭದಲ್ಲಿ ಗ್ಯಾರಂಟಿ ಸದಸ್ಯರುಗಳಾದ ಅಶ್ರಫ್ ಬೆಂಗ್ರೆ ಕ್ರಿಸ್ಟನ್ ಮೇನೆಜಸ್, ನೀತು ,ವಿದ್ಯಾ ಮುಂತಾದವರು ಉಪಸ್ಥಿತರಿದ್ದರು ವಿವಿಧ ಇಲಾಖೆಯಿಂದ ಮಾಹಿತಿಗಳನ್ನು ನೀಡಲಾಯಿತು ಕಾರ್ಯಕ್ರಮದಲ್ಲಿ ಬಹಳಷ್ಟು ಜನರು ಉಪಸ್ಥಿತರಿದ್ದರು.