ನವದೆಹಲಿ: ನಟ ರಿಷಬ್ ಶೆಟ್ಟಿ ಅವರಿಗೆ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಕಾಂತಾರ ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದಕ್ಕೆ ನಟ ರಿಷಬ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.
ಆ.16ರಂದು 2022ನೇ ಸಾಲಿನ ಚಲನಚಿತ್ರಗಳಿಗೆ ಕೇಂದ್ರದ ವಾರ್ತಾ, ಪ್ರಸಾರ ಇಲಾಖೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಆಯ್ಕೆ ಮಾಡಿ ಘೋಷಣೆ ಮಾಡಿತ್ತು. 2022ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಬಿಡುಗಡೆಯಾದ ಸಿನಿಮಾಗಳಲ್ಲಿ ಕಾಂತಾರ ಹಾಗೂ ಕೆಜಿಎಫ್ ಚಿತ್ರ ಆಯ್ಕೆ ಆಗಿತ್ತು. ರಿಷಬ್ ಶೆಟ್ಟಿ ಅವರಿಗೆ ಮಲಯಾಳಂ ನಟ ಮಮ್ಮುಟಿ ಅವರು ಪೈಪೋಟಿ ನೀಡಿದ್ದರೂ ಅಂತಿಮವಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆಯಾಗಿದ್ದರು.
ಅತ್ಯುತ್ತಮ ಚಿತ್ರ ಪ್ರಶಸ್ತಿ ಕನ್ನಡದ ಕೆಜಿಎಫ್ ಚಿತ್ರಕ್ಕೆ ಸಿಕ್ಕಿದ್ದು. ಅತ್ಯುತ್ತಮ ನಟ ಪ್ರಶಸ್ತಿ ಕಾಂತಾರದ ರಿಷಬ್ ಶೆಟ್ಟಿಯವರಿಗೆ ದಕ್ಕಿದೆ. ಕಾಂತಾರಾಗೆ ಅತ್ಯುತ್ತಮ ಮನರಂಜನೆ ಸಿನಿಮಾ ಎಂಬ ಪ್ರಶಸ್ತಿಯೂ ಸಿಕ್ಕಿದೆ. ಕೆಜಿಎಫ್, ಕಾಂತಾರ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಎರಡು ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಸ್ವೀಕಾರ ಮಾಡಿದ್ದಾರೆ.
ಇನ್ನು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನಿತ್ಯಾ ಮೆನನ್ ಗಳಿಸಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ನಾಲ್ಕನೇ ನಟರಾಗಿ ರಿಷಬ್ ಶೆಟ್ಟಿ ಗುರುತಿಸಿಕೊಂಡಿದ್ದಾರೆ.
ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ನಟ ರಿಷಬ್ ಶೆಟ್ಟಿ | ಕನ್ನಡದ ಎರಡು ಸಿನಿಮಾಗಳಿಗೆ ರಾಷ್ಟ್ರೀಯ ಪುರಸ್ಕಾರ
RELATED ARTICLES