ದಾವಣಗೆರೆ : ತೆಲಂಗಾಣ ರಾಜ್ಯದ ಹೈದರಾಬಾದ್‌ನ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರಿಡಾಂಗಣದಲ್ಲಿ ಇತ್ತೀಚಿಗೆ 5 ದಿನಗಳ ಕಾಲ ನಡೆದ ರಾಷ್ಟ್ರಮಟ್ಟದ ಪುರುಷರ, ಮಹಿಳೆಯರ ನ್ಯಾಷನಲ್ ಸೀನಿಯರ್ ಕ್ಲಾಸಿ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್-2024 ಸ್ಪರ್ಧೆಯ ತೀರ್ಪುಗಾರರಗಿ ಪ್ರಾಮಾಣಿಕವಾಗಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಿದ ಅಂತರಾಷ್ಟ್ರಿಯ ಕ್ರೀಡಾಪಟು, ಪವರ್ ಲಿಫ್ಟಿಂಗ್‌ನಲ್ಲ ಜೀವಮಾನದ ಪ್ರಶಸ್ತಿ ಪುರಸ್ಕೃತರು, ಸ್ಟ್ರಾಂಗ್ ಮ್ಯಾನ್ ಆಫ್ ಏಷ್ಯಾ ಪ್ರಶಸ್ತಿ ಪುರಸ್ಕೃತರು ಹಾಗೂ ರಾಷ್ಟ್ರಿಯ ಕೆಟಗರಿ ನಂ.1 ತೀರ್ಪುಗಾರರಾದ ದಾವಣಗೆರೆ ಜಿಲ್ಲೆಯ, ಹರಿಹರ ತಾಲ್ಲೂಕಿನ ಗಂಗನರಸಿ ಗ್ರಾಮದ ದಾವಣಗೆರೆ ವಾಸಿ ಎಂ.ಮಹೇಶ್ವರಯ್ಯನವರಿಗೆ “ಬೆಸ್ಟ್ ಸ್ಮಾರ್ಟ್ ರೆಫರಿ ಆಫ್ ಇಂಡಿಯಾ ರನ್ನರ್” ಟ್ರೊಫಿಗೆ ಭಾಜನರಾಗಿದ್ದಾರೆ. ದಾವಣಗೆರೆಯ ಬೀರಲಿಂಗೇಶ್ವರ ವ್ಯಾಯಾಮ ಶಾಲೆ, ಗ್ರೂಫ್ ಅಫ್ ಐರನ್ ಗೇಮ್ಸ್, ನಗರಸಭೆ ವ್ಯಾಯಾಮಶಾಲೆಯ ಎಲ್ಲಾ ಹಿರಿಯರು, ಕಿರಿಯ ಕ್ರೀಡಾಪಟುಗಳು, ಅಧಿಕಾರ ವರ್ಗದವರು ಎಲ್ಲಾ ಅಭಿಮಾನಿಗಳು ಎಂ.ಮಹೇಶ್ವರಯ್ಯರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.