ಕ್ಷಿಣ ಪಂಢರಪುರ ಖ್ಯಾತಿಯ ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆದು ಬರುತ್ತಿರುವ ಕಾರ್ತಿಕ ಏಕಾದಶಿಯ ಅಖಂಡ ಭಜನಾ ಏಕಾಹ ಮಹೋತ್ಸವವು ಮಂಗಳವಾರ ಬೆಳಿಗ್ಗೆ 8.00 ಕ್ಕೆ ಶ್ರೀ ದೇವತಾ ಪ್ರಾರ್ಥನೆ ಮತ್ತು ದೀಪ ಪ್ರಜ್ವಲನದಿಂದ ಪ್ರಾರಂಭವಾಯಿತು.ಈ ಸಂದರ್ಭದಲ್ಲಿ ಆಡಳಿತೆ ಮೊಕ್ತೇಸರ ಭದ್ರಗಿರಿ ಪಾಂಡುರಂಗ ಆಚಾರ್ಯ, ಗೌರಾವಾಧ್ಯಕ್ಷ ನಾಗರಮಠ ಮಂಜುನಾಥ ನಾಯಕ್ ,ಆಡಳಿತ ಮತ್ತು ವಿಶ್ವಸ್ಥ ಮಂಡಳಿಯ ಸದಸ್ಯರಾದ ಸತೀಶ ಕಿಣಿ ಬೆಳ್ವೆ, ಪ್ರಭಾಕರ ಭಟ್, ಗಣೇಶ ಜಿ ಪೈ ಪರ್ಕಳ,ಭದ್ರಗಿರಿ ರಘುವೀರ ಆಚಾರ್ಯ, ವಿಠ್ಠಲದಾಸ ಆಚಾರ್ಯ, ಮಹೇಶ ಆಚಾರ್ಯ, ಗಿರಿಧರ ರಾವ್, ಲೆಕ್ಕ ಪರಿಶೋಧಕರಾದ ಸಿಏ ಗಣೇಶ ಕಾಮತ್, ಪುರೋಹಿತರಾದ ವೇದಮೂರ್ತಿ ಕಲ್ಯಾಣಪುರ ಕಾಶೀನಾಥ ಭಟ್, ಬ್ರಹ್ಮಾವರ ಕೃಷ್ಣಾನಂದ ಶರ್ಮ ಮತ್ತು ಅರ್ಚಕರಾದ ಸದಾನಂದ ಆಚಾರ್ಯ ಹಾಗೂ ಭಜಕರಾದ ಸಿ.ರತ್ನಾಕರ ಪೈ,ಮಂಗಲಾ ಕಾಮತ್, ಸಿಂಧು ಕಾಮತ್ ,ಪ್ರಸಾದ ರಾವ್ ಉಪಸ್ಥಿತರಿದ್ದರು .ಅಖಂಡ ಭಜನಾ ಮಹೋತ್ಸವದಲ್ಲಿ ಊರ ಪರ ಊರಿನ 15 ಭಜನಾ ಮಂಡಳಿಗಳು ಪಾಲ್ಗೊಂಡು ಭಜನಾ ಸೇವೆ ಸಲ್ಲಿಸಿದವು. ಸಂಜೆ ದೀಪೋತ್ಸವ ಮತ್ತು ರಾತ್ರಿ ಪ್ರಸನ್ನಪೂಜೆಯಿಂದ ಭಜನಾ ಮಂಗಲೋತ್ಸವ ಸಂಪನ್ನಗೊಂಡಿತು.
ಭಧ್ರಗಿರಿ : ಕಾರ್ತೀಕ ಏಕಾದಶಿ ಅಖಂಡ ಭಜನಾ ಮಹೋತ್ಸವ
RELATED ARTICLES