ಶಿವಪುರ : ಯುವಕರು ಸೇರಿ ಶ್ರೀರಾಮ ಫ್ರೆಂಡ್ಸ್ ಸಂಘಟನೆ ಸ್ಥಾಪಿಸಿರುವುದು ಹೆಮ್ಮೆಯ ಕೆಲಸ. ಸಂಘಟನೆಯಿಂದ ಜನಸೇವೆ ಮತ್ತು ದೇಶ ಕಟ್ಟುವ ಕಾರ್ಯ ನಡೆಯಲಿ, ಸಂಘಟನೆಯು ನಿರಂತರವಾಗಿ ಮುನ್ನಡೆಯಲಿ, ಭಗವದ್ ಧ್ವಜ ಭಾರತದ ಪ್ರತೀಕ ಎಂದು ಮುನಿಯಾಲು ಹಿಂದೂ ಹೆಲ್ಪ್ ಲೈನ್ ಸಂಸ್ಥೆಯ ಗೌರವಾಧ್ಯಕ್ಷ ಡಾ.ಕಬ್ಬಿನಾಲೆ ಸುದರ್ಶನ್ ಹೆಬ್ಬಾರ್ ಹೇಳಿದರು.
ಅವರು ಭಾನುವಾರ ಶಿವಪುರ ಗ್ರಾಮದ ಕೆಳಖಜಾನೆಯಲ್ಲಿ ನಡೆದ ಶ್ರೀರಾಮ ಫ್ರೆಂಡ್ಸ್, ಧ್ವಜಕಟ್ಟೆಯ ಉದ್ಘಾಟನೆ ಮತ್ತು ಭಗವದ್ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮುನಿಯಾಲು ಹಿಂದೂ ಹೆಲ್ಪ್ ಲೈನ್ ಸಂಸ್ಥೆಯ ಗೌರವಾಧ್ಯಕ್ಷ ಡಾ.ಕಬ್ಬಿನಾಲೆ ಸುದರ್ಶನ್ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು.
ಶಿವಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹುಣ್ಸೆಯಡಿ ಸುರೇಶ ಶೆಟ್ಟಿ, ಸದಸ್ಯ ಸಂತೋಷ ಶೆಟ್ಟಿ ನಾಯರಕೋಡು, ಕಡ್ತಲ ಗ್ರಾಮ ಪಂಚಾಯಿತಿ ಸದಸ್ಯ ಸತೀಶ ಪೂಜಾರಿ ಮುಳ್ಕಾಡು, ಕೆಳಖಜಾನೆ ಶ್ರೀರಾಮ ಫ್ರೆಂಡ್ಸ್ ಅಧ್ಯಕ್ಷ ರಿತೇಶ್ ಶೆಟ್ಟಿ, ಉಪಾಧ್ಯಕ್ಷ ಅಶೋಕ ಆಚಾರ್ಯ, ಕಾರ್ಯದರ್ಶಿ ಮಹೇಶ್ ಕುಲಾಲ್, ಕೆಳಖಜಾನೆಯ ಹಿರಿಯರು, ಗ್ರಾಮಸ್ಥರು, ಸರ್ವಸದಸ್ಯರು ಉಪಸ್ಥಿತರಿದ್ದರು. ಮುನಿಯಾಲು ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿಕ್ಷಕ ಖಜಾನೆ ಲಕ್ಷ್ಮೀನಾರಾಯಣ ಬೋರ್ಕರ್ ನಿರೂಪಿಸಿ ಸ್ವಾಗತಿಸಿದರು.