ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನ ತೋಕೂರು ಹಳೆಯಂಗಡಿಯಲ್ಲಿ ವಿಶೇಷ ದಿನವಾದ ಮಂಗಳವಾರ, ನವರಾತ್ರಿ ಮತ್ತು ಲಲಿತಾ ಪಂಚಮಿಯ ಪ್ರಯುಕ್ತ ದಿನಾಂಕ 08/10/2024 ರಂದು ಬೆಳಿಗ್ಗೆ ಘಂಟೆ 11.00 ರಿಂದ ಮಧ್ಯಾಹ್ನ 12.30 ರ ತನಕ ಜಿಲ್ಲಾ,ರಾಜ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ದ.ಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ) ತೋಕೂರು ಹಳೆಯಂಗಡಿ ಇದರ ಮಹಿಳಾ ಕಾರ್ಯಕಾರಿ ಸಮಿತಿ ಸದಸ್ಯೆಯರಿಂದ ಭಜನಾ ಸಂಕೀರ್ತನೆ ಜರುಗಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸಾಂಸ್ಕೃತಿಕ ಕಾರ್ಯದರ್ಶಿ ಗೀತಾ ಸದಾನಂದ, ಸದಸ್ಯೆಯರಾದ ಪ್ರಮೀಳಾ ಕೇಶವ, ಸುಜಾತ ನಾರಾಯಣ, ಸುಷ್ಮಾ ಪ್ರಕಾಶ್ ಆಚಾರ್ಯ, ಅರ್ಚನಾ ಮಹೇಶ್ ಉಪಸ್ಥಿತರಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಪ್ರಧಾನ ಅರ್ಚಕರಾದ ಶ್ರೀ ಮಧುಸೂದನ.ಟಿ ಆಚಾರ್ಯ ಭಜನಾ ತಂಡಕ್ಕೆ ಪ್ರಸಾದ ವಿತರಿಸಿದರು.