Thursday, September 12, 2024
HomeUncategorizedತೋಕೂರು ಸ್ಪೋರ್ಟ್ಸ್ ಕ್ಲಬ್ ಸದಸ್ಯರಿಂದ ಸುರತ್ಕಲ್ ನಲ್ಲಿ ಭಜನಾ ಸಂಕೀರ್ತನೆ

ತೋಕೂರು ಸ್ಪೋರ್ಟ್ಸ್ ಕ್ಲಬ್ ಸದಸ್ಯರಿಂದ ಸುರತ್ಕಲ್ ನಲ್ಲಿ ಭಜನಾ ಸಂಕೀರ್ತನೆ

ಪುರಾತನ ಶ್ರೀ ಮಾರಿಯಮ್ಮ ದೇವಸ್ಥಾನ, ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಸುರತ್ಕಲ್, ಶ್ರಾವಣ ಮಾಸದ ಅಂಗವಾಗಿ ನವದುರ್ಗಾ ಪ್ರೆಂಡ್ಸ್ ಸರ್ಕಲ್(ರಿ) ಸುರತ್ಕಲ್ ಇದರ ಆಶ್ರಯದಲ್ಲಿ 9ನೇ ವರ್ಷದ ಸಾಂಸ್ಕೃತಿಕ ಅಮೃತ ವರ್ಷಿಣಿಯ ಪ್ರಯುಕ್ತ ದಿನಾಂಕ 30/08/2024 ರಂದು ಸಂಜೆ ಘಂಟೆ 6.15 ರಿಂದ 8.30 ರ ತನಕ ಜರುಗಿದ ಭಜನಾ ಯಜ್ಞ ಸಂಕೀರ್ತನೆಯಲ್ಲಿ ಜಿಲ್ಲಾ,ರಾಜ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ)ತೋಕೂರು, ಹಳೆಯಂಗಡಿ ಇದರ ಸದಸ್ಯರಿಂದ ಭಜನೆ ಕಾರ್ಯಕ್ರಮ ಜರುಗಿತು.ಈ ಸಂದರ್ಭ ಭಜನಾ ಸಂಕೀರ್ತನೆಯಲ್ಲಿ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರಾದ ಶ್ರೀ ಪ್ರಸಾದ್ ಆಚಾರ್ಯ ಇವರ ಮುಂದಾಳತ್ವದಲ್ಲಿ ಸಂಸ್ಥೆಯ ಅಧ್ಯಕ್ಷರು ಶ್ರೀ ದೀಪಕ್ ಸುವರ್ಣ, ಉಪಾಧ್ಯಕ್ಷರು ಶ್ರೀ ಸಂತೋಷ್ ಕುಮಾರ್,ಕಾರ್ಯಾಧ್ಯಕ್ಷರು ಶ್ರೀ ಸಂತೋಷ್ ದೇವಾಡಿಗ,ಶ್ರೀ ಪ್ರಭಾಕರ ಶೆಟ್ಟಿಗಾರ್ ಕಲ್ಲಾಪು,ಮಾಸ್ಟರ್ ಯಶ್ ಪಾಲ್ಗೊಂಡಿದ್ದರು.ಸಂಸ್ಥೆಯ ಸದಸ್ಯರಾದ ಶ್ರೀ ಶಶಿಧರ ಆಚಾರ್ಯ ತಬ್ಲಾದಲ್ಲಿ ಹಾಗೂ ಶ್ರೀ ನಾಗೇಶ್ ಶೆಟ್ಟಿ ಸೂರಿಂಜೆ ಇವರು ಹಾರ್ಮೋನೀಯಂನಲ್ಲಿ ಸಹಕರಿಸಿದರು.

RELATED ARTICLES
- Advertisment -
Google search engine

Most Popular