ನವರಾತ್ರಿ ಉತ್ಸವದಲ್ಲಿ ಪ್ರತಿದಿನ ರಾತ್ರಿ ವಿವಿಧ ಭಜನಾ ತಂಡಗಳಿಂದ ಭಜನೆ, ಆಕರ್ಷಕ ಕುಣಿತ ಭಜನೆ, ಚಾರ್ವಾಕ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳದವರಿಂದ ಚೆಂಡೆ ವಾದನ ಕಾರ್ಯಕ್ರಮಕ್ಕೆ ಮೆರುಗು ನೀಡಿತು. ಮಂಗಳಾರತಿ, ಕುಂಕುಮಾರ್ಚನೆ, ಹೂವಿನ ಪೂಜೆ, ಸರ್ವಸೇವೆ, ಮಹಾಪೂಜೆ, ನವರಾತ್ರಿ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಅ. 11ರಂದು ಸಂಜೆ ವಾಹನ ಪೂಜೆ ನಡೆಯಿತು.
ಕ್ಷೇತ್ರದಲ್ಲಿ 6 ಸಾವಿರಕ್ಕೂ ಮಿಕ್ಕಿ ಭಕ್ತರಿಂದ ಅನ್ನಪ್ರಸಾದ ಸ್ವೀಕಾರ
ಕಾಣಿಯೂರು ಮಠದ ಸ್ವಾಮೀಜಿಯವರಾದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಇವರ ಆದೇಶದಂತೆ ಶ್ರೀ ಅಮ್ಮನವರ ಕ್ಷೇತ್ರದಲ್ಲಿ ನವರಾತ್ರಿ ಪೂಜೆಯನ್ನು ನಡೆಸಲು ತೀರ್ಮಾನಿಸಿದ್ದು, ಊರ ಪರವೂರ ಭಕ್ತರ, ಎಲ್ಲಾ ಸಂಘ ಸಂಸ್ಥೆಗಳ ಸಹಕಾರದಿಂದ ನವರಾತ್ರಿ ಉತ್ಸವವು ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಸುಮಾರು 6 ಸಾವಿರಕ್ಕಿಂತಲೂ ಮಿಕ್ಕಿ ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿದ್ದಾರೆ. ಶ್ರೀನಿಧಿ ಆಚಾರ್ಯ, ವ್ಯವಸ್ಥಾಪಕರು ಕಾಣಿಯೂರು ಶ್ರೀ ಮಠ
ಎಲ್ಲರ ಸಹಕಾರದಿಂದ ಯಶಸ್ವಿ
ಅ.3ರಂದು ಪ್ರಾರಂಭಗೊಂಡಿರುವ ನವರಾತ್ರಿ ಪೂಜೆಯು ಅ. 12ರವರೆಗೆ ಬಹಳ ಯಶಸ್ವಿಯಾಗಿ ನಡೆದಿದೆ. ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರ ಆಶೀರ್ವಾದ, ಊರಿನ ಎಲ್ಲಾ ದೈವ ದೇವರ ಅನುಗ್ರಹ, ಮಠದ ವ್ಯವಸ್ಥಾಪಕರ ನೇತೃತ್ವ, ಕಾಣಿಯೂರಿನ ಎಲ್ಲಾ ಸಂಘ ಸಂಸ್ಥೆಗಳ ಸಹಕಾರದಿಂದ ಹಾಗೂ ಊರ ಪರವೂರ ಭಕ್ತರ ಪರಿಶ್ರಮದಿಂದ, ಶ್ರೀ ಅಮ್ಮನವರ ದಯೆಯಿಂದ ಯಶಸ್ವಿಯಾಗಿ ನಡೆಯಲು ಸಾಧ್ಯವಾಗಿದೆ.
ಪದ್ಮಯ್ಯ ಗೌಡ ಅನಿಲ ಅಧ್ಯಕ್ಷರು, ಉತ್ಸವ ಸಮಿತಿ ಅ.15-ಮಠದಲ್ಲಿ ಶ್ರೀದುರ್ಗಾ ನಮಸ್ಕಾರ ಪೂಜೆ ಕಾಣಿಯೂರು ಶ್ರೀ ರಾಮತೀರ್ಥ ಮಠದಲ್ಲಿ ಶ್ರೀ ಲಕ್ಷ್ಮೀನೃಸಿಂಹ ಮತ್ತು ಮುಖ್ಯ ಪ್ರಾಣ ದೇವರ ಸನ್ನಿಧಿಯಲ್ಲಿ ನವರಾತ್ರಿ ಪ್ರಯುಕ್ತ ಶ್ರೀ ದುರ್ಗಾ ನಮಸ್ಕಾರ ಪೂಜೆಯು ಕಾಣಿಯೂರು ಶ್ರೀ ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಅ. 15ರಂದು ನಡೆಯಲಿದೆ ಎಂದು ಮಠದ ವ್ಯವಸ್ಥಾಪಕ ಶ್ರೀನಿಧಿ ಆಚಾರ್ಯ ತಿಳಿಸಿದ್ದಾರೆ.
ಭಜನಾ ತಂಡ, ಕೊಡಿಮಾರು ಅಬೀರ ಗೆಳೆಯರ ಬಳಗ, ಶಾಂತಿಮೊಗರು ಶ್ರೀ ಸುಬ್ರಹ್ಮಣೇಶ್ವರ ಭಜನಾ ಮಂಡಳಿ, ಮೂವಪ್ಪ ಧರ್ಮ ಶ್ರೀ ಮಕ್ಕಳ ಕುಣಿತ ಭಜನಾ ತಂಡ, ಕಾಣಿಯೂರು ಶ್ರೀ ಅಮ್ಮನವರು ಮಹಿಳಾ ಭಜನಾ ಮಂಡಳಿ, ಕಾಣಿಯೂರು ಕಣ್ಣರ್ಷಿ ಮಹಿಳಾ ಮಂಡಲ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ, ಶ್ರೀ ಸುಬ್ರಹ್ಮಣ್ಯಶ್ವರ ಮಕ್ಕಳ ಕುಣಿತ ಭಜನಾ ತಂಡ ಕುದ್ಗಾರು, ಶ್ರೀರಾಮ ಮಕ್ಕಳ ಕುಣಿತ ಭಜನಾ ತಂಡ ಕಲ್ಲಡ್ಕ, ಶ್ರೀ ಚಾಮುಂಡೇಶ್ವರಿ ಕುಣಿತ ಭಜನಾ ತಂಡ ಪುತ್ತೂರು ಹಾಗೂ ಗಾನ ಮಾಧುರ್ಯ ಕಲಾಕೇಂದ್ರ ಕಾಣಿಯೂರು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.