Wednesday, July 24, 2024
Homeರಾಷ್ಟ್ರೀಯಕೇಂದ್ರದ ಭಾರತ್‌ ಅಕ್ಕಿ ಮಾರಾಟ ತಾತ್ಕಾಲಿಕ ಬಂದ್

ಕೇಂದ್ರದ ಭಾರತ್‌ ಅಕ್ಕಿ ಮಾರಾಟ ತಾತ್ಕಾಲಿಕ ಬಂದ್

ಬೆಂಗಳೂರು: ಕೇಂದ್ರ ಸರ್ಕಾರ ಆರಂಭಿಸಿದ್ದ ಭಾರತ್‌ ಅಕ್ಕಿ ಮಾರಾಟ ಜುಲೈ ತಿಂಗಳಿನಿಂದ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ದೇಶದ ಎಲ್ಲಾ ಜನರಿಗೆ ಕಡಿಮೆ ಬೆಲೆಯಲ್ಲಿ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಭಾರತ್‌ ರೈಸ್‌ ಅಕ್ಕಿಯನ್ನು ಬಿಡುಗಡೆ ಮಾಡಿತ್ತು. ಲೋಕಸಭಾ ಚುನಾವಣೆ ವೇಳೆ ಈ ಅಕ್ಕಿ ಮತದಾರರ ಗಮನ ಸೆಳೆದಿತ್ತು.
ಈ ಯೋಜನೆಯ ಪ್ರಕಾರ 29 ರೂ.ಗೆ 1 ಕೆಜಿ ಅಕ್ಕಿ, 27.50 ರೂ.ಗೆ 1 ಕೆಜಿ ಗೋದಿ ಹಿಟ್ಟು, 60 ರೂ.ಗೆ 1 ಕೆಜಿ ಕಡಲೆ ಬೇಳೆ ಮಾರಾಟ ಮಾಡಲಾಗುತ್ತಿತ್ತು. ಜನ ಸಂದಣಿ ಇರುವ ಜಾಗಗಳಲ್ಲಿ ಮೊಬೈಲ್‌ ವ್ಯಾನ್‌ ಮೂಲಕ ಅಕ್ಕಿ, ಬೇಳೆಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು. ಜೂ. 10ರವರೆಗೆ ದಾಸ್ತಾನುಗಳ ಮಾರಾಟದ ನಂತರ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.


ಇದುವರೆಗೆ 5 ಸಾವಿರ ಟನ್‌ ಅಕ್ಕಿ ಮಾರಾಟ ಮಾಡಲಾಗಿದೆ. ಆದರೆ ಈಗ ಯಾವ ಕಾರಣಕ್ಕಾಗಿ ಮಾರಾಟ ನಿಲ್ಲಿಸಲಾಗಿದೆ ಎಂಬ ಸ್ಪಷ್ಟ ಮಾಹಿತಿ ಇಲ್ಲ.

RELATED ARTICLES
- Advertisment -
Google search engine

Most Popular