ಮೂಡುಬಿದಿರೆ ಸ್ವಾಮೀಜಿ ಮಹಾ ರಾಷ್ಟ್ರ ಧಾರ್ಮಿಕ ಪ್ರವಾಸ ಇಂದು 08.7.24 ಕೊಲ್ಲಾಪುರ ಕನೇರಿ ಕಾಡ ಸಿದ್ದೇಶ್ವರ ಶ್ರೀ ಮಠದಲ್ಲಿ ಜರುಗಿದ ಭಾರತೀಯ ಸoಸ್ಕೃತಿ ಪರಿಷತ್ ವತಿಯಿಂದ ಜರುಗಿದ ಸಂತ ಸಮಾವೇಶದಲ್ಲಿ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಭಾಗವಹಿಸಿ ಅಭಿಪ್ರಾಯ ಹಂಚಿಕೊಂಡರು.
ಉಡುಪಿ ಅದಮಾರು ಶ್ರೀ ಮಠದ ಈಶ ಪ್ರಿಯ ಸ್ವಾಮೀಜಿ ಹರಿಹರ ಶ್ರೀ ಮಠ ದ ಸ್ವಾಮೀಜಿ ಬೆಂಗಳೂರು ಮಲ್ಲಿಕಾರ್ಜುನ ಸ್ವಾಮೀಜಿ ಸರ್ಪ ಭೂಷಣ ಮಠ,
ಅರೂಢ ಭಾರತಿ ಸ್ವಾಮೀಜಿ, ಮೊದಲಾದ ವಿವಿಧ ಮಠ ಗಳ ಸ್ವಾಮೀಜಿ ಗಳು ಮುಖ್ಯವಾಗಿ ಕರ್ನಾಟಕ ಮಹಾರಾಷ್ಟ್ರದ ಸಂತರು ಭಾಗವಹಿಸಿ ದ್ದರು ಬೆಳಿಗ್ಗೆ 7.00 ಗಂಟೆಗೆ ಮೂಡುಬಿದಿರೆ ಶ್ರೀ ಕೊಲ್ಲಾಪುರ ಮಹಾ ಲಕ್ಷ್ಮಿ ದೇವಾಲಯ ಭೇಟಿ ನೀಡಿ ಅಭಿಷೇಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ತೀರ್ಥ0ಕರ ಕಿಂಡಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು ಅರ್ಚಕ ರಾದ ಅಶುತೋಷ್ ಠಾಣೆಕಾರ್, ಬಾಲಚಂದ್ರ ಮುಖ್ಯ ಅರ್ಚಕರು ಸ್ವಾಮೀಜಿ ಗೆ ಪೂಜಾ ಪ್ರಸಾದ ನೀಡಿ ವಿಶೇಷ ಗೌರವ ಸಲ್ಲಿಸಿದರು. 07.07.24 8.7.24ರ ಮಹಾರಾಷ್ಟ್ರದ ಎರಡು ದಿನ ಧಾರ್ಮಿಕ ಪ್ರವಾಸ ದಲ್ಲಿದ್ದ ಶ್ರೀ ಗಳು ಕೊಲ್ಲಾಪುರ ಕೋಥಾಳಿಯಲ್ಲಿದ್ದ ಆಚಾರ್ಯ ಚಂದ್ರ ಪ್ರಭ ಸಾಗರ ಕುಂಥು ಗಿರಿ ಪುರ ಪ್ರವೇಶ ಮಾಡಿದ್ದ ಆಚಾರ್ಯ ವಿಶುದ್ದ ಸಾಗರ ಮುನಿ ರಾಜರ ಹಾಗೂ ಸಂಘಸ್ಥ ಸಾಧುಗಳ ದರ್ಶನ ಪಡೆದು ಧರ್ಮ ನಗರ ಬಳಿಯ ಭಾರತೀಯ ಆಡಳಿತ ಸುಧಾರಣೆಯ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಆಶೀರ್ವಾದ ಮಾಡಿದರು. ಈ ಸಂದರ್ಭ ದರ್ಶನ ಭಾಗೇ ವಾಡಿ, ಮೇಘನಾಥ್ ಬಾಗೇ ವಾಡಿ ಶ್ರೀ ಗಳ ಜೊತೆಗಿದ್ದರು.
ಭಾರತೀಯ ಸoಸ್ಕೃತಿ ಪರಿಷತ್ ವತಿಯಿಂದ ನಡೆದ ಸಮಾವೇಶದಲ್ಲಿ ಭಟ್ಟಾರಕ ಸ್ವಾಮೀಜಿ ಭಾಗಿ
RELATED ARTICLES