ಬಂಟ್ವಾಳ: ಪಾಣೆಮಂಗಳೂರಿನಲ್ಲಿರುವ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಈಗಾಗಲೇ ಆರಂಭಗೊಂಡಿದ್ದು, ತನ್ನಿಮಿತ್ತವಾಗಿ ವೈಭವದ ಹೊರೆಕಾಣಿಕೆ ಮೆರವಣಿಗೆ ಮಂಗಳವಾರ ನಡೆಯಿತು. ನರಿಕೊಂಬು ದೊಂಪದಬಳಿಯ ನಾಲ್ಕೆತ್ತಾಯ ದೈವಸ್ಥಾನದಿಂದ ಹೊರಟ ಮೆರವಣಿಗೆ ನರಿಕೊಂಬು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಿಂದ ಕುರ್ಚಿಪಲ್ಲ, ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನ, ಪಾಣೆಮಂಗಳೂರು ಶ್ರೀ ವೀರವಿಠಲ ದೇವಸ್ಥಾನದಿಂದ ಶ್ರೀ ಭಯಂಕೇಶ್ವರ ಸದಾಶಿವ ಕ್ಷೇತ್ರಕ್ಕೆ ತಲುಪಿತು. ಹನುಮಂತನ ಟ್ಯಾಬ್ಲೊ ಸಹಿತ ವಿವಿಧ ಟ್ಯಾಬ್ಲೊಗಳು, ಚೆಂಡೆ ಸಹಿತ ಆಕರ್ಷಕ ಪ್ರದರ್ಶನಗಳೊಂದಿಗೆ ಸ್ಥಳೀಯ ಗಣ್ಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದೀಪಪ್ರಜ್ವಲನಗೈದು, ಶುಭ ಹಾರೈಸಿದರು. ವ್ಯವಸ್ಥಾಪನಾ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ. ರಘುನಾಥ ಸೋಮಯಾಜಿ ಎರಕಳ, ಬ್ರಹ್ಮಕಲಶ ಮಹೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಲ್, ಕಾಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಕಾರ್ಯದರ್ಶಿ ಪದ್ಮನಾಭ ಮಯ್ಯ ಏಲಬೆ, ಸಂಚಾಲಕ ಪ್ರಕಾಶ್ ಕಾರಂತ ನರಿಕೊಂಬು, ಕೋಶಾಧಿಕಾರಿ ಕೆ. ಶಂಕರನಾರಾಯಣ ರಾವ್, ವ್ಯವಸ್ಥಾಪನಾ ಮತ್ತು ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ರಘು ಸಫಲ್ಯ, ಕಾರ್ಯದರ್ಶಿ ಲೋಕೇಶ್ ಕೆ. ನರಹರಿ ನಗರ, ಸದಸ್ಯರಾದ ಮೋಹನ ಆಚಾರ್ಯ, ಚಂದ್ರಾವತಿ ರತ್ನಾಕರ ನಾಯ್ಕ, ಕೃಷ್ಣಪ್ಪ ಗಾಣಿಗ, ಸಂಜೀವ ಸಪಲ್ಯ, ಪ್ರಮುಖರಾದ ನಾರಾಯಣ ಸೋಮಯಾಜಿ, ಪುರುಷೋತ್ತಮ ಸಾಲಿಯಾನ್, ಸಂತೋಷ್ ಕುಮಾರ್, ಪ್ರೇಮನಾಥ ಶೆಟ್ಟಿ ಅಂತರ, ಶ್ರೀಶ ರಾಯಸ, ವಸಂತ ಪಿ, ಭುವನೇಶ್, ಪ್ರಕಾಶ್ ಕೋಡಿಮಜಲು, ಪ್ರವೀಣ್ ಕುಮಾರ್, ಪುರುಷೋತ್ತಮ ಬಂಗೇರ, ಕಿಶೋರ್ ಶೆಟ್ಟಿ, ಮೋಹನದಾಸ ಕೊಟ್ಟಾರಿ, ಕಮಲಾಕ್ಷ ಶಂಭೂರು ಸಹಿತ ಪ್ರಮುಖರು ಉಪಸ್ಥಿತರಿದ್ದರು.