ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ (ರಿ) ವಿಟ್ಲ ತಾಲೂಕಿನ ಅಳಿಕೆ ವಲಯದ ಮುಳಿಯ ಗ್ರಾಮದ ವಾತ್ಸಲ್ಯ ಸದಸ್ಯರಾದ ಸರಸ್ವತಿಯವರಿಗೆ ಕ್ಷೇತ್ರದಿಂದ ಮಂಜೂರಾದ ವಾತ್ಸಲ್ಯ ಮನೆ ರಚನೆ ಕಾಮಗಾರಿಗೆ ಚಾಲನೆಯನ್ನು ತಾಲ್ಲೂಕು ಯೋಜನಾಧಿಕಾರಿ ರಮೇಶ್ ಸರ್ ನೀಡಿದರು. ಈ ಸಂಧರ್ಭ ವಾತ್ಸಲ್ಯ ಸದಸ್ಯರಾದ ಸರಸ್ವತಿ, ಅಳಿಕೆ ವಲಯ ವಲಯಾಧ್ಯಕ್ಷರಾದ ರಾಜೇಂದ್ರ ರೈ, ಜನ ಜಾಗೃತಿ ವಲಯಾಧ್ಯಕ್ಷರಾದ ಬಾಲಕೃಷ್ಣ ಕಾರಂತ, ಒಕ್ಕೂಟದ ಅಧ್ಯಕ್ಷರಾದ ಉದಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಪ್ರತಿನಿಧಿ ದೀಪಕ್, ಘಟಕ ಸದಸ್ಯರುಗಳು, ವಲಯ ಮೇಲ್ವಿಚಾರಕರು, ತಾಲ್ಲೂಕು ಸಮನ್ವಯಧಿಕಾರಿ, ಸೇವಾಪ್ರತಿನಿಧಿಗಳು, ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು.