ಬಿಗ್ ಬಾಸ್ ಸೀಸನ್ 11ರ ಸೀಸನ್ ದಿನದಿಂದ ದಿನಕ್ಕೆ ಕುತೂಹಲಕಾರಿಯಾಗಿ ಮುನ್ನಡೆಯುತ್ತಿದೆ. ಜಗದೀಶ್ ಹಾಗೂ ಚೈತ್ರಾ ನಡುವೆ ದೊಡ್ಡ ವಾಗ್ಯುದ್ಧವೇ ನಡೆದಿದ್ದು, ಅದರ ಪ್ರಮೋ ಈಗ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಯಾರು, ಯಾರನ್ನೂ ನಂಬುವಂತಿಲ್ಲ. ಇಲ್ಲಿ ಸ್ನೇಹ, ವಿಶ್ವಾಸ, ನಂಬಿಕೆಗಳಿಗೆ ಜಾಗವೇ ಇಲ್ಲ ಎನ್ನುವಂತಾಗಿದೆ. ಈಗಾಗಲೇ 2 ವಾರಗಳನ್ನು ಮುಗಿಸಿರುವ ಸೀಸನ್ 11 ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಟಾಸ್ಕ್‌ಗಳಲ್ಲಿ ಗೆಲ್ಲೋದಕ್ಕಿಂತ ಸೀಸನ್ 11ರ ಸ್ಪರ್ಧಿಗಳು ಮಾತಿನ ಯುದ್ಧದಲ್ಲಿ ಗೆಲ್ಲೋ ಪಣತೊಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವವರೆಂದರೆ ಅದು ಜಗದೀಶ್. ಈ ಜಗದೀಶ್ ಅವರಿಗೂ ಚೈತ್ರಾಗೂ ಭಾರೀ ವಾಗ್ವಾದ ನಡೆದಿದೆ. ಆಕೆ ಏನ್ ಮಾತಾಡುತ್ತಾಳೆ. ಆಕೆಗೆ ಏನು ಫಾಲೋವರ್ಸ್ ಇದ್ದಾರೆ. ನನಗೂ ಫಾಲೋವರ್ಸ್ ಇದ್ದಾರೆ. ಆಕೆ ಮೇಲೆ 28 ಕೇಸ್‌ಗಳಿವೆ ಎಂದು ಜಗದೀಶ್ ಅವರು ಗುಡುಗಿದ್ದಾರೆ. ಜಗದೀಶ್ ಬಾಯಲ್ಲಿ ಕೇಸ್‌ಗಳ ವಿಚಾರ ಹೊರ ಬಂದಿದ್ದಕ್ಕೆ ಕೋಪಿಸಿಕೊಂಡಿರುವ ಚೈತ್ರಾ ಕೆಂಡಾಮಂಡಲರಾಗಿದ್ದಾರೆ. ನನ್ನ ಎದುರು ನಿಲ್ಲೋ ತಾಕತ್ತು ಇಲ್ಲ ಥೂ.. ಎಂದಿರುವ ಚೈತ್ರಾ ಕೊಚ್ಚೆ ಮೇಲೆ ಕಲ್ಲು ಹಾಕಬಾರ್ದು ಅಷ್ಟೇ. ತಾಕತ್ತು ಇದ್ದವನು ಬಂದು ಎದುರುಗಡೆ ನಿಂತು ಮಾತಾಡಲಿ ಎಂದು ಖಡಕ್ ಸವಾಲು ಹಾಕಿದ್ದಾರೆ.
ಚೈತ್ರಾ ಅವರ ರೌದ್ರಾವತಾರ ಇಷ್ಟಕ್ಕೆ ನಿಂತಿಲ್ಲ. ನನ್ನ ಕೇಸ್ ಬಗ್ಗೆ ಯಾವನಿಗೂ ಮಾತನಾಡುವ ಯೋಗ್ಯತೆನೂ ಇಲ್ಲ.. 50 ಅಲ್ಲ, 100 ಕೇಸ್ ಹಾಕಿಸಿಕೊಳ್ಳುತ್ತೀನಿ.. ಇವರಪ್ಪನಿಗೆ ಹೊಡೆದು ನಾನು ಕೇಸ್ ಹಾಕಿಸಿಕೊಂಡಿಲ್ಲ. ಯಾವನಾದ್ರೂ ಅಪ್ಪನಿಗೆ ಹುಟ್ಟಿದ್ರೆ ನನ್ನ ಕಣ್ಣೆದುರಿಗೆ ಬಂದು ನನ್ನ ಕೇಸ್ ಬಗ್ಗೆ ಮಾತನಾಡಲಿ ಎಂದು ಜಗದೀಶ್‌ಗೆ ಸವಾಲು ಹಾಕಿದ್ದಾರೆ. ಸ್ವರ್ಗ, ನರಕ ಒಂದಾಗಿ ಬಿಗ್ ಬಾಸ್ ಮನೆಯೂ ಒಂದಾಗಿತ್ತು. ಆದರೆ ಈಗ ಸ್ವರ್ಗದಲ್ಲೇ ನರಕದ ವಾತಾವರಣ ಸೃಷ್ಟಿಯಾಗಿದೆ. ಚೈತ್ರಾ ಅವರು ಜಗದೀಶ್‌ಗೆ ನೀನಾ, ನಾನಾ ನೋಡೇ ಬಿಡೋಣ ಅಂತ ಎದುರು ನಿಂತಿದ್ದಾರೆ. ಜಗದೀಶ್ ಅವರು ಚೈತ್ರಾ ಅವರ ಕಣ್ಣಿನ ನೋಟಕ್ಕೆ ದೃಷ್ಟಿ ಯುದ್ಧ ಘೋಷಿಸಿದ್ದಾರೆ. ಇವರಿಬ್ಬರ ಜಗಳದಲ್ಲಿ ಮನೆಯ ಉಳಿದ ಸದಸ್ಯರು ತಮ್ಮ ಪಾಡಿಗೆ ತಾವು ತೆರಳಿದ್ದಾರೆ. ಇಂದಿನ ಎಪಿಸೋಡ್‌ನಲ್ಲಿ ಚೈತ್ರಾ, ಜಗದೀಶ್ ಅವರ ಮಾತಿನ ಯುದ್ಧದ ಏನಾಗುತ್ತೆ ಅನ್ನೋ ಕ್ಲೈಮ್ಯಾಕ್ಸ್ ಗೊತ್ತಾಗಲಿದೆ.
ವಿಡಿಯೋ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ…
https://www.instagram.com/p/DBI1N-kh9nu/?utm_source=ig_embed&utm_campaign=embed_video_watch_again