Monday, December 2, 2024
Homeಬೆಂಗಳೂರುಬಿಗ್‌ಬಾಸ್‌ 11 | ಜಸ್ಟೀಸ್‌ ಫಾರ್‌ ಜಗದೀಶ್‌ | ವಕೀಲ್‌ಸಾಬ್‌ ಪರ ನಿಂತ ಜನ; ಕನ್ಫ್ಯೂಶನ್‌ನಲ್ಲಿ...

ಬಿಗ್‌ಬಾಸ್‌ 11 | ಜಸ್ಟೀಸ್‌ ಫಾರ್‌ ಜಗದೀಶ್‌ | ವಕೀಲ್‌ಸಾಬ್‌ ಪರ ನಿಂತ ಜನ; ಕನ್ಫ್ಯೂಶನ್‌ನಲ್ಲಿ ಬಿಗ್‌ಬಾಸ್!‌

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಕಾರ್ಯಕ್ರಮದ ಮೂರನೇ ವಾರ ದೊಡ್ಮನೆಯಲ್ಲಿ ದೊಡ್ಡ ಜಗಳ ನಡೆದು ಇಬ್ಬರು ಕಂಟೆಸ್ಟೆಂಟ್‌ಗಳನ್ನು ಮನೆಯಿಂದ ಆಚೆ ಹಾಕಲಾಗಿತ್ತು. ಆದರೆ ಇದೀಗ ಮನೆಯಿಂದ ಹೊರ ಹಾಕಲ್ಪಟ್ಟ ಲಾಯರ್‌ ಜಗದೀಶ್‌ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಜಗದೀಶ್‌ ಅವರನ್ನು ಹೊರ ಹಾಕಿರುವುದು ಸರಿಯಲ್ಲ, ಅವರಿಗೆ ನ್ಯಾಯ ಸಿಗಬೇಕು ಎಂಬರ್ಥದಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗಳಾಗುತ್ತಿವೆ. ಲಾಯರ್‌ ಜಗದೀಶ್‌ ಅವರಿಂದಲೇ ನಾವು ಈ ಕಾರ್ಯಕ್ರಮ ನೋಡುತ್ತಿದ್ದೇವೆ, ಜಗದೀಶ್‌ ಇಲ್ಲಾಂದ್ರೆ ಕಾರ್ಯಕ್ರಮ ನೋಡಲ್ಲ ಎಂದು ಸಹಸ್ರಾರು ಮಂದಿ ಸೋಶಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿ ಹಾಗೂ ನಿಂದನೆಯ ಪದಗಳನ್ನು ಬಳಸಿದ್ದರು ಎನ್ನುವ ಕಾರಣಕ್ಕೆ ಜಗದೀಶ್‌ ಅವರ ಮೇಲೆ ಮಹಿಳಾ ಸ್ಪರ್ಧಿಗಳು ಮುಗಿಬಿದ್ದು, ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ರಂಜಿತ್‌ ಆಕ್ರೋಶಿತರಾಗಿ ರಂಜಿತ್‌ ಅವರನ್ನು ತಳ್ಳಿದ್ದಾರೆ. ದೈಹಿಕ ಹಲ್ಲೆ ನಡೆಸಿದ್ದಕ್ಕಾಗಿ ಅವರನ್ನೂ ಮನೆಯಿಂದ ಹೊರಹಾಕಲಾಗಿದೆ. ಆದರೆ ಜದೀಶ್‌ಗೇ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಬಿಗ್‌ಬಾಸ್‌ ಬಗ್ಗೆ ಹತ್ತಿರದಿಂದ ಬಲ್ಲ ಕೆಲವು ಅನುಭವಿಗಳ ಪ್ರಕಾರ ಇಂದು ಮತ್ತು ನಾಳೆ ನಡೆಯುವ ನಟ ಸುದೀಪ್‌ ಅವರ ವಾರದ ಪಂಚಾಯತಿಯಲ್ಲಿ, ಚರ್ಚೆ ನಡೆಸಿ ಜಗದೀಶ್‌ ಅವರನ್ನು ಮತ್ತೆ ಮನೆಗೆ ಕರೆಸಿಕೊಳ್ಳಲಾಗುತ್ತದೆ ಎಂದೇ ಹೇಳಲಾಗುತ್ತಿದೆ.
ಕೇವಲ ಮಾತಿನ ಉದ್ದೇಶಕ್ಕಾಗಿ ಜಗದೀಶ್‌ ಅವರನ್ನು ಹೊರಹಾಕುವುದಾದರೆ, ಮನೆಯಲ್ಲಿ ಇರುವ ಇತರ ಸ್ಪರ್ಧಿಗಳೂ ಇದಕ್ಕಿಂತ ಕೀಳಾದ ಪದಗಳನ್ನು ಬಳಸಿದ್ದಾರೆ. ಮಹಿಳೆಯರೇ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ಬಗ್ಗೆಯೂ ನಿರ್ಧಾರ ಕೈಗೊಳ್ಳಬೇಕಿತ್ತು ಎಂದು ಸೋಶಿಯಲ್‌ ಮೀಡಿಯಾದಲ್ಲಿ ಆಗ್ರಹ ಕೇಳಿಬಂದಿದೆ. ಅಲ್ಲದೆ, ಗಂಡು ಮಕ್ಕಳಿಗೂ ಗೌರವ ಇದೆ, ಗಂಡು ಮಕ್ಕಳನ್ನು ಅವಮಾನಿಸುವವರನ್ನೂ ಶಿಕ್ಷಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಜಸ್ಟೀಸ್‌ ಫಾರ್‌ ಜಗದೀಶ್‌ ಎಂದೇ ಕಮೆಂಟ್‌ ಮಾಡಲಾಗುತ್ತಿದೆ. ಜಗದೀಶ್‌ ಅವರಿಗೆ ನ್ಯಾಯಸಿಗಬೇಕು. ಕಿಚ್ಚನ ಪಂಚಾಯತಿಯಲ್ಲಿ ಇದು ಚರ್ಚೆ ಆಗಲೇ ಬೇಕು ಎಂದು ವೀಕ್ಷಕರು ಆಗ್ರಹಿಸಿದ್ದಾರೆ.
ಇನ್ನೊಂದೆಡೆ ಇಂದು ಬಿಡುಗಡೆಯಾದ ಪ್ರಮೋ ಕೂಡ ಕುತೂಹಲ ಮೂಡಿಸಿದೆ. ಜಗದೀಶ್‌ ಅವರನ್ನು ಮನೆಯಿಂದ ಹೊರಹಾಕಲಾಗಿದೆ ಎನ್ನಲಾದ ಬಳಿಕ ಹೆಚ್ಚು ಪ್ರಮೋ ಬಿಡುಗಡೆಯಾಗಿರಲಿಲ್ಲ. ಇವತ್ತಿನ ಪ್ರಮೋ ಮಾತ್ರ ಬಿಡುಗಡೆಯಾಗಿದೆ. ಈ ಪ್ರಮೋದಲ್ಲಿ ಸುದೀಪ್‌ ಅವರು, ಇಷ್ಟು ವರ್ಷ ಮನೆಯವರು ಮಾಡುವ ತಪ್ಪುಗಳನ್ನು ಚರ್ಚೆ ಮಾಡುತ್ತಿದ್ದ ಈ ವೇದಿಕೆಯಲ್ಲಿ ಈ ಸಲ ಕಂಪ್ಲೇಂಟ್‌ ಇರುವುದು ಬಿಗ್‌ ಬಾಸ್‌ ಮೇಲೆ. ಬಿಗ್‌ ಬಾಸ್‌ ಅವಸರದ ನಿರ್ಧಾರ ತಗೊಂಡ್ರಾ? ಅಥವಾ ತಗೊಂಡಿರುವ ನಿರ್ಧಾರ ತಪ್ಪಾಗಿತ್ತಾ? ಎನ್ನುವುದನ್ನು ಪ್ರಮೋದಲ್ಲಿ ತೋರಿಸಲಾಗಿದೆ. ಜಗದೀಶ್‌ ಹಾಗೂ ರಂಜಿತ್‌ ಅವರನ್ನು ಮತ್ತೆ ಬಿಗ್‌ ಬಾಸ್‌ ವೇದಿಕೆಗೆ ಕರೆದು ಮನೆಯೊಳಗೆ ಕಳುಹಿಸುತ್ತಾರಾ? ಅಥವಾ ಈ ಬಗ್ಗೆ ಸ್ಪಷ್ಟನೆ ಕೊಡುತ್ತಾರಾ? ಎಂಬುದು ಇಂದು ಮತ್ತು ನಾಳೆಯ ಸಂಚಿಕೆಯಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಪ್ರಮೋ ವಿಡಿಯೋ ವೀಕ್ಷಿಸಲು ಲಿಂಕ್‌ ಕ್ಲಿಕ್‌ ಮಾಡಿ…

https://x.com/ColorsKannada/status/1847543601263497300?ref_src=twsrc%5Etfw%7Ctwcamp%5Etweetembed%7Ctwterm%5E1847543601263497300%7Ctwgr%5E17f3594528d4fd3ce8eceed50e2ed39c6e42a2a4%7Ctwcon%5Es1_&ref_url=https%3A%2F%2Fwww.udayavani.com%2Fcinema%2Fsmall-screen%2Fbbk11-jagdish-should-get-justice-people-stand-for-vakil-saab

RELATED ARTICLES
- Advertisment -
Google search engine

Most Popular