ನವರಾತ್ರಿ ಪ್ರಯುಕ್ತ ಜೈನ ಕಾಶಿ ಮೂಡು ಬಿದಿರೆ ಯ ಬೆಂಕಿ ಬಸದಿ, ಲೆಪ್ಪದ ಬಸದಿ,ಶ್ರೀ ದಿಗಂಬರ ಜೈನ ಮಠ ದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ ಪ್ರತಿ ವರ್ಷ ದಂತೆ ಜೀವ ದಯಾ ಅಷ್ಟಮಿ ಮೂಡು ಬಿದಿರೆ ಯಲ್ಲಿ ಬಹಳ ವಿಜೃಂಭಣೆ ಯಿಂದ ನೆರವೇರುತ್ತದೆ ಈ ಬಾರಿ 11.10.24 ಶುಕ್ರವಾರ ಬೆಳಿಗ್ಗೆ 6.00ರಿಂದ ಮೂಡು ಬಿದಿರೆ ಶ್ರೀ ಶ್ರೀ ಗಳಿಂದ 18ಬಸದಿ ದರ್ಶನ 8 ಗಂಟೆ ಗೆ ಶ್ರೀ ಮಠ ದಲ್ಲಿ ಕ್ಷೀರ ಅಭಿಷೇಕ ಶ್ರೀ ಗಳಿಂದ ದಶ ಭಕ್ತಿ ಹಾಗೂ ಸಂಕ್ಷಿಪ್ತ ಜೈನ ಧರ್ಮ ಎಂಬ ಶಾಸ್ಟ ದಾನ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ಪ್ರಕಾಶಿತ ಗ್ರಂಥ ಬಿಡು ಗಡೆ ಗೊಳಿಸಿ ಮನುಷ್ಯ ನಿಗೆ ಮನಸು ವಚನ ಕಾಯ ದ ವಿವಿಧ ಪ್ರವೃತ್ತಿ ಗಳಿಂದ ಬರುವ ಕರ್ಮ ಗಳನ್ನು ನಿಲ್ಲಿಸಲು ದೇವರ ಪೂಜೆ ಗುರು ಗಳ ವಿನಯ ಭಕ್ತಿ ಶಾಸ್ತ್ರ ಸ್ವಾಧ್ಯಯ, ಸoಯಮ ತಪ ಸ್ಸಿ ನಿಂದ ಸಾಧ್ಯ ಸಕಲ ಜೀವಿ ಗಳ ಬಗೆಗಿನ ದಯೆ ಬದುಕು ಬದುಕಲು ಬಿಡು ಅನ್ನುವ ಸರ್ವಾನುಕಂಪ ಜೀವಿ ಗಳ ನಿರ್ಭಯ ಶಾಂತಿ ಯ ಜೀವನ ಕ್ಕೆ ನಾಂದಿ ಎಂದು ನುಡಿದರು ಬೆಳಿಗ್ಗೆ 11ರಿಂದ ಸಾಮೂಹಿಕ ಶುದ್ಧ ಭೋಜನ ವ್ಯವ ಸ್ಥೆ ಮಹಾವೀರ ಭವನ ದಲ್ಲಿ ಶ್ರೀ ಮಠ ದಿಂದ ದಾನಿಗಳ ಸಹಕಾರ ದಿಂದ ಮಾಡಲಾಗಿತ್ತು ಹಾಗೂ ಅಪ ರಾಹ್ನ 3.00 ಸಾವಿರ ಕಂಬ ಬಸದಿ ಸಿದ್ದ ಕೂಟ ದಲ್ಲಿ ಸರ್ವಪೂಜೆ,ಸಂಜೆ 4.00 ಗಂಟೆ ಗೆ ಗುರು ಬಸದಿ ಕ್ಷೀರ ಅಭಿಷೇಕ 5.00ಗಂಟೆ ಗೆ ಲೆಪ್ಪದ ಬಸದಿ ಕ್ಷೀರ ಅಭಿಷೇಕ,ಸಂಜೆ 7.00ಗಂಟೆ. ಸರಸ್ವತಿ ಪೂಜೆ ಬೆಂಕಿ ಬಸದಿ ಜರುಗಿತು ಮಧ್ಯ ಪ್ರದೇಶ, ರಾಜ ಸ್ಥಾನ ಚತ್ತಿಸ್ ಘಡ, ಮಹಾರಾಷ್ಟ್ರ, ಹರ್ಯಾಣ ದೆಹಲಿ ಕರ್ನಾಟಕ, ಕೇರಳ ವಿವಿಧ ಪ್ರಾಂತ್ಯ ಗಳಿಂದ ಸಹಸ್ರಾರು ಜನ ಶ್ರದ್ದಾ ಭಕ್ತಿ ಯಿಂದ ಬೆಳಿಗ್ಗೆ 6ಗಂಟೆ ಯಿಂದ ಜೈನ ಕಾಶಿ ಬಸದಿ, ಶಾಸ್ತ್ರ, ಗುರು ಗಳ ದರ್ಶನ ಮಾಡಿದರು.