Monday, December 2, 2024
HomeUncategorized'ಸಿಎಂ ಸಿದ್ಧರಾಮಯ್ಯ'ಗೆ ಬಿಗ್ ರಿಲೀಫ್: ನ.26ಕ್ಕೆ 'CBI ತನಿಖೆ' ಕೋರಿದ್ದ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

‘ಸಿಎಂ ಸಿದ್ಧರಾಮಯ್ಯ’ಗೆ ಬಿಗ್ ರಿಲೀಫ್: ನ.26ಕ್ಕೆ ‘CBI ತನಿಖೆ’ ಕೋರಿದ್ದ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್


ಬೆಂಗಳೂರು: ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯಗೆ ಇದಿಗ ಬಿಗ್ ರಿಲೀಫ್ ಸಿಕ್ಕಿದೆ. ದೂರುದಾರ ಸ್ನೇಹಮಯಿ ಕೃಷ್ಣ ಅವರು ಈ ಒಂದು ಪ್ರಕರಣ ಸಿಬಿಐ ತನಿಖೆಗೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ಕೈಗೆತ್ತಿಕೊಂಡ ವೇಳೆಯಲ್ಲಿ ಕಾಲಾವಕಾಶ ಕೋರಿದ ಹಿನ್ನಲೆಯಲ್ಲಿ ನವೆಂಬರ್.26ಕ್ಕೆ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿಕೆ ಮಾಡಿದೆ.
ಇಂದು ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ತನಿಖೆಯಲ್ಲಿ ನಂಬಿಕೆಯಿಲ್ಲ. ಸಿಬಿಐ ತನಿಖೆಗೆ ಆದೇಶಿಸುವಂತೆ ಕೇರಿ ಸಲ್ಲಿಸಿದ್ದಂತ ರಿಟ್ ಅರ್ಜಿಯನ್ನು ಹೈ ಕೋರ್ಟ್ ನಲ್ಲಿ ನ್ಯಾ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆಯಲ್ಲಿ ಹೈಕೋರ್ಟ್ ಗೆ ಈ ಪ್ರಕರಣ ಸಂಬಂಧ ವಾದಿಸಲು ಕಾಲಾವಕಾಶ ನೀಡುವಂತೆ ಸಿಎಂ ಸಿದ್ಧರಾಮಯ್ಯ ಪರ ವಕೀಲರು ಕೋರಿದರು. ಈ ಹಿನ್ನಲೆಯಲ್ಲಿ ಹೈಕೋರ್ಟ್ ವಿಚಾರಣೆಯನ್ನು ನ.26ಕ್ಕೆ ಮುಂದೂಡಿದೆ.

ಅಂದಹಾಗೇ ಕಳೆದ ಸಪ್ಟೆಂಬರ್ 27ರಂದು ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ತನಿಖೆಯ ಮೇಲೆ ನಂಬಿಕೆ ಇಲ್ಲ ಎಂದು ಅವರು ಹೈಕೋರ್ಟಿಗೆ ಸಿಬಿಐ ತನಿಖೆಗೆ ಆದೇಶ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಲೋಕಾಯುಕ್ತ ಪೊಲೀಸ್, ಸಿಬಿಐ ಪ್ರತಿವಾದಿಗಳು, ಸಿದ್ದರಾಮಯ್ಯ ಪತ್ನಿ ಪಾರ್ವತಿ ಕೂಡ ಪ್ರತಿವಾದಿಗಳಾಗಿ ಮಾಡಲಾಗಿತ್ತು

RELATED ARTICLES
- Advertisment -
Google search engine

Most Popular