Tuesday, December 3, 2024
HomeUncategorizedಮದ್ಯಪ್ರಿಯರಿಗೆ ಬಿಗ್‌ ಶಾಕ್‌ : ಆ ದಿನದಂದು ಮದ್ಯ ಸಿಗೋದು ಡೌಟು..!

ಮದ್ಯಪ್ರಿಯರಿಗೆ ಬಿಗ್‌ ಶಾಕ್‌ : ಆ ದಿನದಂದು ಮದ್ಯ ಸಿಗೋದು ಡೌಟು..!

ಬೆಂಗಳೂರು: ರಾಜ್ಯ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಹೀಗಾಗಿ ಸ್ವಚ್ಚ ಅಬಕಾರಿ ಅಭಿಯಾನ ಘೋಷಣೆ ಅಡಿ ಹೋರಾಟ ಮಾಡಲು ಮದ್ಯದಂಗಡಿ ಮಾಲೀಕರ ಮುಷ್ಕರ ನಡೆಸಲು ಸಿದ್ದತೆ ನಡೆಸಿದ್ದು, ಇದೆ ನವೆಂಬರ್ 20 ರಂದು ರಾಜ್ಯವ್ಯಾಪ್ತಿ ಮದ್ಯ ಮಾರಾಟ ಸ್ಥಗಿತಗೊಳಿಸಿ ಮದ್ಯದಂಗಡಿ ಮಾಲೀಕರು ಪ್ರತಿಭಟನೆ ನಡೆಸಲಿದ್ದಾರೆ.
ಹೌದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಲ್ಲದೆ ರಾಜ್ಯ ಅಬಕಾರಿ ಇಲಾಖೆಯಲ್ಲಿ ವಿಪರೀತ ಭ್ರಷ್ಟಾಚಾರದಿಂದ ಮದ್ಯದ ಅಂಗಡಿ ಮಾಲೀಕರು ಬೇಸತ್ತು ಹೋಗಿದ್ದು, ಹಾಗಾಗಿ ರಾಜ್ಯದಲ್ಲಿ ನವೆಂಬರ್ 20 ರಂದು ಒಂದು ದಿನ ಮದ್ಯದಂಗಡಿ ಬಂದ್ ಆಗಲಿದೆ. ಇದರಿಂದ ಮದ್ಯಪ್ರಿಯರಿಗೆ ಅವತ್ತಿನ ಒಂದು ದಿನ ಮಧ್ಯ ಸಿಗುವುದು ಬಹುತೇಕ ಡೌಟ್ ಎಂದು ಹೇಳಲಾಗುತ್ತಿದೆ.

ಅಬಕಾರಿ ಇಲಾಖೆಯಲ್ಲಿ ಲೈಸೆನ್ಸ್ ನವೀಕರಣ, ಸಿಎಲ್ 7 ಲೈಸೆನ್ಸ್ ಗೆ ಅನುಮತಿ ಹೆಸರಿನಲ್ಲಿ ಮದ್ಯದಂಗಡಿ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೇಡಿಕೆಗಳ ಈಡೇರಿಕೆಗೆ ಅಬಕಾರಿ ಮಂತ್ರಿಗೆ ಮದ್ಯದಂಗಡಿ ಮಾಲೀಕರು ಮನವಿ ಮಾಡಿದ್ದರು. ಆದರೆ ಮದ್ಯದಂಗಡಿ ಮಾಲೀಕರ ಸಮಸ್ಯೆಗೆ ಅಬಕಾರಿ ಸಚಿವರು ಸ್ಪಂದಿಸಿಲ್ಲ ಎನ್ನಲಾಗಿದೆ. ಹೀಗಾಗಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಸನ್ನದುದಾರರು ಒತ್ತಾಯ ಮಾಡಿದ್ದಾರೆ.
ಮುಖ್ಯಮಂತ್ರಿ ಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಒತ್ತಾಯಿಸುತ್ತಿದ್ದಾರೆ.ಅಬಕಾರಿ ಭ್ರಷ್ಟಾಚಾರ ನಿಗ್ರಹಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದಿರುವ ಸನ್ನದುದಾರರು. ಅಬಕಾರಿ ಇಲಾಖೆ ಉಸ್ತುವಾರಿಯನ್ನು ಆರ್ಥಿಕ ಸಚಿವರೇ ವಹಿಸಬೇಕು ಅಂತ ಮದ್ಯದಂಗಡಿ ಮಾಲೀಕರು ಒತ್ತಾಯಿಸಿದ್ದಾರೆ.ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ನವೆಂಬರ್ 20ರಂದು ರಾಜ್ಯವ್ಯಾಪ್ತಿ ಮದ್ಯ ಮಾರಾಟ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ

RELATED ARTICLES
- Advertisment -
Google search engine

Most Popular