ಆಗಸ್ಟ್ 29 ರಂದು ತಿಮರೋಡಿ ಆಂಡ್ ಪತ್ನಿಗೆ ಕುದ್ದು ಹಾಜರಾತಿಗೆ ಹೈಕೋರ್ಟ್ ಆದೇಶ
ಬೆಂಗಳೂರು : ನ್ಯಾಯಾಂಗ ನಿಂದನೆ ಯಾಗೂ ನ್ಯಾಯಾಧೀಶರನ್ನು ಸಾರ್ವಜನಿಕವಾಗಿ ನಿಂದಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಬೇಷರತ್ತಾಗಿ ಕ್ಷಮೆಯಾಚಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ ಪ್ರಮಾಣ ಪತ್ರವನ್ನು ಪುರಸ್ಕರಿಸಿದ ನ್ಯಾಯಾಲಯವು ನ್ಯಾಯಾಧೀಶರನ್ನು ನಿಂದಿಸಿದ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಆದರೆ ಇದೀಗ ಇನ್ನುಳಿದಂತೆ ಭೂ ಕಬಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಅರ್ಜಿ ಮುಕ್ತಾಯಗೊಂಡಿರುವುದಿಲ್ಲವಾಗಿದ್ದು, ಆ ಪ್ರಕರಣದಲ್ಲಿ ಇದೇ ಆಗಸ್ಟ್ ೨೯ ನ್ಯಾಯಾಲಯದ ಮುಂದೆ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಆತನ ಪತ್ನಿಗೆ ಕುದ್ದು ಹಾಜರಾತಿಗೆ ಆದೇಶ ಮಾಡಿದೆ.