Wednesday, April 23, 2025
Homeಬೆಳಗಾವಿಎಂಬಿಎ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್; ಲವ್-ಸೆಕ್ಸ್-ದೋಖಾ..!

ಎಂಬಿಎ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್; ಲವ್-ಸೆಕ್ಸ್-ದೋಖಾ..!


ಬೆಳಗಾವಿ: ಇತ್ತೀಚೆಗೆ ಬೆಳಗಾವಿಯಲ್ಲಿ ಪಿಜಿಯಲ್ಲಿಯೇ ಎಂಬಿಎ ವಿದ್ಯಾರ್ಥಿನಿ ಐಶ್ವರ್ಯಾ ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ನಡೆದಿತ್ತು. ಇದೀಗ ಈ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಿಯಕರನ ಪ್ರೀತಿ-ಪ್ರೇಮ-ಮೋಸದಾಟಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಐಶ್ವರ್ಯಲಕ್ಷ್ಮೀ ಹಾಗೂ ಆಕಾಶ್ ಎಂಬ ಯುವಕ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಇಬ್ಬರೂ ವಿಜಯಪುರ ಜಿಲ್ಲೆಯ ಚಡಚಣ ಮೂಲದವರು. ಕೆಲಸಕ್ಕೆಂದು ಬೆಳಗಾವಿಗೆ ಬಂದಿದ್ದರು. ಕೆಲ ದಿನಗಳಿಂದ ಆಕಾಶ್ ಐಶ್ವರ್ಯಾಳನ್ನು ಬಿಟ್ಟು ಬೇರೊಂದು ಯುವತಿ ಹಿಂದೆ ಬಿದ್ದಿದ್ದ. ಐಶ್ವರ್ಯಳನ್ನು ದೂರ ಮಾಡಿದ್ದ, ಇದರಿಂದ ತೀವ್ರವಾಗಿ ಮನನೊಂದಿದ್ದ ಐಶ್ವರ್ಯ, ಆತ್ಮಹತ್ಯೆಗೂ ಮುನ್ನ ಯುವಕ ಆಕಾಶ್ ಗೆ ತನ್ನ ಸಾವಿಗೆ ನೀನು ಹಾಗೂ ಇನ್ನೋರ್ವ ಯುವತಿಯೇ ಕಾರಣ ಎಂದು ಮೆಸೇಜ್ ಹಾಕಿದ್ದಳು. ಬಳಿಕ ತನ್ನ ಸ್ನೇಹಿತೆಯೊಂದಿಗೂ ಮಾತನಾಡಿದ್ದ ಐಶ್ವರ್ಯಾ ರೂಮಿಗೆ ಬಂದು ನೇಣಿಗೆ ಶರಣಾಗಿದ್ದಳು.

ಐಶ್ವರ್ಯಾಳಿಂದ ಮೆಸೇಜ್ ಬರುತ್ತಿದ್ದಂತೆ ಪಿಜಿ ರೂಮಿಗೆ ಓಡೋಡಿ ಬಂದ ಆಕಾಶ್, ಐಶ್ವರ್ಯಾ ರೂಮಿನ ಬಾಗಿಲು ಒಡೆದು ಆಕೆಯ ಮೊಬೈಲ್ ಕದ್ದು ಪರಾರಿಯಾಗಿದ್ದ. ಆಕೆ ಮೆಸೇಜ್ ನಿಂದ ತಾನು ಸಿಕ್ಕಿಹಾಕಿಕೊಳ್ಳಬಾರದೆಂದು ಮೊಬೈಲ್ ಕದ್ದು ಎಕೇಪ್ ಆಗಿದ್ದ. ಆದಾಗ್ಯೂ ಐಶ್ವರ್ಯ ಆತ್ಮಹತ್ಯೆ ಪ್ರಕರಣದ ತನಿಖೆ ವೇಳೆ ಆಕಾಶ್ ಸಿಕ್ಕಿಬಿದ್ದಿದ್ದಾನೆ. ಸದ್ಯ ಆರೋಪಿ ಆಕಾಶ್ ನನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

RELATED ARTICLES
- Advertisment -
Google search engine

Most Popular