Tuesday, April 22, 2025
Homeಪುತ್ತೂರುಅಂಗಡಿಗೆ ನುಗ್ಗಿ ಬಟ್ಟೆಗಳೊಂದಿಗೆ ಪರಾರಿಯಾದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್!!

ಅಂಗಡಿಗೆ ನುಗ್ಗಿ ಬಟ್ಟೆಗಳೊಂದಿಗೆ ಪರಾರಿಯಾದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್!!

ವಿಟ್ಲ: ಮಾ.18ರ ಮಧ್ಯಾಹ್ನ ವಿಟ್ಲದ ಬಟ್ಟೆ ಅಂಗಡಿಯಲ್ಲಿ ದರೋಡೆ ನಡೆದಿದೆ ಎಂಬ ರೀತಿಯಲ್ಲಿ ಚಿತ್ರಿಸಿ ಸಿಸಿಟಿವಿಯ ತುಣುಕುಗಳನ್ನು ಹಾಕಿ ವೈರಲ್ ಮಾಡಲಾಗಿತ್ತು. ಆದರೆ ಅಸಲಿಗೆ ನಡೆದದ್ದೇ ಬೇರೆ.

ಬಟ್ಟೆಯಂಗಡಿಯಾತ ವಿವಿಧ ವಿನ್ಯಾಸದ ಬಟ್ಟೆಗಳನ್ನು ತರಿಸಿಕೊಂಡು ಹಣ ನೀಡದೆ ಸತಾಯಿಸಿದ ಹಿನ್ನೆಲೆಯಲ್ಲಿ ವಿತರಣೆ ಮಾಡಿದಾತ ತಾನು ನೀಡಿದ್ದ ಬಟ್ಟೆಗಳನ್ನು ಅಂಗಡಿಯಿಂದ ಕೊಂಡೊಯ್ದಿದ್ದರು.

ಬಟ್ಟೆಗಳನ್ನು ಅಂಗಡಿಗೆ ವಿತರಣೆ ಮಾಡಿ, ಅದರ ಹಣವನ್ನು ತಿಂಗಳ ಕೊನೆಗೆ ಪಡೆದುಕೊಂಡು ಹೋಗಲಾಗುತ್ತಿತ್ತು. ಇತ್ತೀಚೆಗೆ ವಿಟ್ಲ ಪೊಲೀಸ್ ಠಾಣೆ ಪಕ್ಕದಲ್ಲಿ ನೂತನವಾಗಿ ಪ್ರಾರಂಭಗೊಂಡ ಬಟ್ಟೆ ಅಂಗಡಿಯಲ್ಲಿಯೂ ಇದೇ ಸಂಪ್ರದಾಯ ಚಾಲ್ತಿಯಲ್ಲಿತ್ತು.

ಬಟ್ಟೆ ಅಂಗಡಿ ಮಾಲಕ ಸುಮಾರು ಎರಡು ತಿಂಗಳುಗಳಿಂದ ಬಟ್ಟೆ ವಿತರಣೆ ಮಾಡಿದವನಿಗೆ 5,500 ರೂ. ಬಾಕಿ ಇರಿಸಿಕೊಂಡಿದ್ದ. ಇದರಿಂದ ರೋಸಿ ಹೋದ ವಿತರಕನು ಮಂಗಳವಾರ ಕಾರಿನಲ್ಲಿ ಬಂದು ತಾನು ನೀಡಿದ್ದ ಬಟ್ಟೆಗಳನ್ನು ಅಂಗಡಿಯಿಂದ ಹಿಂಪಡೆದುಕೊಂಡು ತೆರಳಿದ್ದಾನೆ. ಈ ಬಗ್ಗೆ ಎರಡು ಕಡೆಯವರೂ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.

RELATED ARTICLES
- Advertisment -
Google search engine

Most Popular