Monday, January 20, 2025
Homeರಾಷ್ಟ್ರೀಯಮಣಿಪುರದಲ್ಲಿ ಬಿಹಾರದ ಬಾಲಕರ ಹತ್ಯೆ: ಮೃತದೇಹ ಸ್ವಗ್ರಾಮಕ್ಕೆ ಹಿಂತಿರುಗಿಸಲು ಮಣಿಪುರ ಸರ್ಕಾರಕ್ಕೆ ಪೋಷಕರ ಮನವಿ

ಮಣಿಪುರದಲ್ಲಿ ಬಿಹಾರದ ಬಾಲಕರ ಹತ್ಯೆ: ಮೃತದೇಹ ಸ್ವಗ್ರಾಮಕ್ಕೆ ಹಿಂತಿರುಗಿಸಲು ಮಣಿಪುರ ಸರ್ಕಾರಕ್ಕೆ ಪೋಷಕರ ಮನವಿ

ಗೋಪಾಲಗಂಜ್: ಮಣಿಪುರದಲ್ಲಿ ನಡೆದಿರುವ ಹಿಂಸಾಚಾರದಲ್ಲಿ ಬಿಹಾರದ ಒಬ್ಬ ಅಪ್ರಾಪ್ತ ಹಾಗೂ ಓರ್ವ ಯುವಕ ಸಾವನ್ನಪ್ಪಿದ್ದು ಅವರ ಮೃತದೇಹ ಸ್ವಗ್ರಾಮಕ್ಕೆ ಹಿಂತಿರುಗಿಸಲು ನೆರವಾಗವಂತೆ ಪೋಷಕರು ಮಣಿಪುರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ರಾಜವಾಹಿ ಗ್ರಾಮದ ನಿವಾಸಿಗಳಾದ ಸುನಾಲಾಲ್ ಕುಮಾರ್ (18) ಮತ್ತು ದಶರತ್ ಕುಮಾರ್ (17) ಮೃತಪಟ್ಟವರಾಗಿದ್ದು, ವಲಸೆ ಕಾರ್ಮಿಕರಾಗಿ ಇವರು ಕೆಲಸ ಮಾಡಲು ಮಣಿಪುರಕ್ಕೆ ತೆರಳಿದ್ದರು.
ದೀಪಾವಳಿ ಬಳಿಕ ಹೆಚ್ಚುವರಿ ಹಣ ಸಂಪಾದಿಸಲು ಇಬ್ಬರು ಮಣಿಪುರಕ್ಕೆ ಹೋಗಿದ್ದರು ಎಂದು ಮೃತರ ಕುಟುಂಬ ತಿಳಿಸಿವೆ. ಮಾಧ್ಯಮದ ಬಳಿ ಮೃತ ದಶರತ್ ಕುಮಾರ್ ಅವರ ತಾಯಿ ರಾಧಿಕಾ ದೇವಿ ಪ್ರತಿಕ್ರಿಯಿಸಿ, “ಮಣಿಪುರದಲ್ಲಿ ಸಂಘರ್ಷವಿದೆ ಎಂದು ನಮಗೆ ತಿಳಿದಿರಲಿಲ್ಲ, ನಮಗೆ ತಿಳಿದಿದ್ದರೆ, ನಾನು ನನ್ನ ಮಗನನ್ನು ಅಲ್ಲಿಗೆ ಕಳುಹಿಸುತ್ತಿರಲಿಲ್ಲ. ನನಗೆ ನನ್ನ ಮಗನ ಮುಖ ಒಮ್ಮೆ ನೋಡಬೇಕು. ನಾನು ಸರ್ಕಾರಕ್ಕೆ ಅದನ್ನೇ ಕೇಳುತ್ತಿದ್ದೇನೆ” ಎಂದು ಕಣ್ಣೀರು ಹಾಕಿದ್ದಾರೆ.
ಮೃತ ದಶರಥ್​ ಕುಮಾರ್ ಅವರ ತಂದೆ ಮೋಹನ್ ಸೋಹನ್ ಅವರ ಇನ್ನೊಬ್ಬ ಮಗ ಕೂಡ ದಶರತ್​​​ ಅವರೊಂದಿಗೆ ತೆರಳಿದ್ದ. ಆತನಿಂದಲೇ ಮಗನ ಸಾವಿನ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ. “ನನಗೆ ನನ್ನ ಇನ್ನೊಬ್ಬ ಮಗನಿಂದ ಕರೆ ಬಂತು. ಅವನ ಹೆಸರು ಸಂತೋಷ್. ಅವನು ನನಗೆ ಅಪ್ಪ, ನನ್ನ ಸಹೋದರ ಮತ್ತು ಸುನಾಲಾಲ್ ಮೃಟತಪಟ್ಟಿದ್ದಾರೆ ಎಂದು ಹೇಳಿದ್ದಾನೆ’. ಆ ಸುದ್ದಿ ಬಂದ ನಂತರ ನಾವು ಆಘಾತಕ್ಕೆ ಒಳಗಾಗಿದ್ದೇವೆ. ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದು ತಂದೆ ಕಣ್ಣೀರು ಹಾಕಿದ್ದಾರೆ.
ಸಿಎಂ ಬಿರೇನ್​ ಸಿಂಗ್ ಖಂಡನೆ​: ಮಣಿಪುರ ಸಿಎಂ ಬಿರೇನ್ ಸಿಂಗ್ ಇಬ್ಬರ ಹತ್ಯೆಯನ್ನು ಖಂಡಿಸಿದ್ದು, ಇದನ್ನು ಭಯೋತ್ಪಾದನಾ ಕೃತ್ಯ ಎಂದಿದ್ದಾರೆ. ಬಿಹಾರದ ಸುನಾಲಾಲ್ ಕುಮಾರ್ ಮತ್ತು ದಶರತ್ ಕುಮಾರ್ ಅವರ ಕ್ರೂರ ಹತ್ಯೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಮಣಿಪುರದ ಕಕ್ಚಿಂಗ್ ಜಿಲ್ಲೆಯ ಈ ಭಯೋತ್ಪಾದನಾ ಕೃತ್ಯವು ನಮ್ಮ ಮೌಲ್ಯಗಳ ಮೇಲೆ ನೇರವಾದ ದಾಳಿಯಾಗಿದೆ ಮತ್ತು ಅವರ ದುಃಖಿತ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು ಎಂದು X ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ.
ಮೃತರ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ಘೋಷಣೆ: ಹತ್ಯೆಯನ್ನು ಬಿಹಾರ ಸಿಎಂ ನಿತೀಶ್​ ಕುಮಾರ್ ಖಂಡಿಸಿದ್ದು, ಮೃತರ ಕುಟುಂಬಕ್ಕೆ ನಿಯಮಾನುಸಾರ ಸವಲತ್ತುಗಳನ್ನು ನೀಡುವಂತೆ ಹಾಗೂ ಇಬ್ಬರ ಮೃತದೇಹವನ್ನು ಅವರ ಸ್ವಗ್ರಾಮಕ್ಕೆ ಸಾಗಿಸಲು ಅಗತ್ಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ನೀಡಲು ಸೂಚಿಸಿದ್ದೇನೆ. ಇದರೊಂದಿಗೆ ಕಾರ್ಮಿಕ ಸಂಪನ್ಮೂಲ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸುತ್ತಿರುವ ಯೋಜನೆಗಳಿಂದ ನಿಯಮಾನುಸಾರ ಇತರ ಸೌಲಭ್ಯಗಳನ್ನು ನೀಡುವಂತೆ ಸೂಚಿಸಿದ್ದೇನೆ. ದೆಹಲಿಯಲ್ಲಿರುವ ಬಿಹಾರದ ರೆಸಿಡೆಂಟ್ ಕಮಿಷನರ್ ಕೂಡ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಮತ್ತು ಸಾಧ್ಯವಿರುವ ಎಲ್ಲ ನೆರವು ನೀಡಲು, ಮೃತರ ಮೃತದೇಹಗಳನ್ನು ಅವರ ಸ್ವಗ್ರಾಮಕ್ಕೆ ಕಳುಹಿಸಲು ಅಗತ್ಯ ವ್ಯವಸ್ಥೆ ಮಾಡಿ ಎಂದು ಸಿಎಂ ಅವರು ಆದೇಶಿಸಿದ್ದಾರೆ.

RELATED ARTICLES
- Advertisment -
Google search engine

Most Popular