Tuesday, December 3, 2024
Homeರಾಜ್ಯರಾತ್ರೋರಾತ್ರಿ ಕೋಟ್ಯಧಿಪತಿಯಾದ ಬೈಕ್ ಮೆಕ್ಯಾನಿಕ್‌ | ಕೇರಳದ ಲಾಟರಿಯ 25 ಕೋಟಿ ರೂ. ಗೆದ್ದ ಮಂಡ್ಯದ...

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಬೈಕ್ ಮೆಕ್ಯಾನಿಕ್‌ | ಕೇರಳದ ಲಾಟರಿಯ 25 ಕೋಟಿ ರೂ. ಗೆದ್ದ ಮಂಡ್ಯದ ಗಂಡು!

ಮಂಡ್ಯ: ಲಕ್ಕಿ ಯಾರಿಗೆ, ಯಾವಾಗ, ಯಾವ ರೂಪದಲ್ಲಿ ಖುಲಾಯಿಸುತ್ತದೆಯೋ ಗೊತ್ತಿಲ್ಲ. ಮಂಡ್ಯದ ಮೆಕ್ಯಾನಿಕ್‌ ಒಬ್ಬರಿಗೆ ಇದೀಗ ಅದೃಷ್ಟ ಖುಲಾಯಿಸಿದ್ದು, ರಾತ್ರೋರಾತ್ರಿ ಕೋಟ್ಯಧಿಪತಿ ಆಗಿದ್ದಾರೆ. ಮಂಡ್ಯದ ಅಲ್ತಾಫ್ ಪಾಷಾ ಎಂಬವರು ಲಾಟರಿಯಲ್ಲಿ‌ 25 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ. ಅಲ್ತಾಫ್‌ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ನಿವಾಸಿ. ವೃತ್ತಿಯಲ್ಲಿ ಬೈಕ್ ಮೆಕಾನಿಕ್ ಆಗಿರುವ ಅಲ್ತಾಫ್, ಎರಡು ದಿನಗಳ ಹಿಂದೆಯಷ್ಟೇ ವಯನಾಡಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು.
ಈ ವೇಳೆ ‌ಪರಿಚಯಸ್ಥರ ಮೂಲಕ ಕೇರಳದ ತಿರುವೋಣಂ ಲಾಟರಿ ಟಿಕೆಟ್‌ ಖರೀದಿಸಿದ್ದರು. ಇದೀಗ ಅಲ್ತಾಫ್ ಪಾಷಾ ಅವರು 25 ಕೋಟಿ ರೂ. ‌ಗೆದ್ದಿದ್ದಾರೆ. ತಾನು ಖರೀದಿ ಮಾಡಿದ ಲಾಟರಿ ಟಿಕೆಟ್‌ಗೆ ಬಹುಮಾನ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಹಣ ತರಲು ಕೇರಳಕ್ಕೆ ಹೋಗಿದ್ದಾರೆ. ಬುಧವಾರ (ಅ.9) ಈ ವರ್ಷದ ತಿರುವೋಣಂ ಬಂಪರ್ ಡ್ರಾ ನಡೆಯಿತು. 360 ಕೋಟಿ ಮೌಲ್ಯದ 71 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು. ಹಾಗಾಗಿ ವಿವಿಧ ಹಂತದ ಬಹುಮಾನಕ್ಕೆ 50 ಕೋಟಿ ರೂ. ನಿಗದಿಪಡಿಸಲಾಗಿತ್ತು. ಓಣಂ ಬಂಪರ್‌ನಲ್ಲಿ 25 ಕೋಟಿ ರೂ. ಮೊದಲ ಬಹುಮಾನ ಗೆದ್ದ ಅದೃಷ್ಟವಂತರು ಯಾರೆಂದು ಟಿಕೆಟ್‌ ಖರೀದಿಸಿದವರೆಲ್ಲಾ ಹುಡುಕುತ್ತಿದ್ದರು. ಆದರೆ, ಕೊನೆಗೆ ಶಾಕ್‌ ನೀಡಿದಂತೆ ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರ ಮೂಲದ ಅಲ್ತಾಫ್ ಗೆದ್ದಿರುವುದು ಅಚ್ಚರಿಯನ್ನು ಮೂಡಿಸಿದೆ.

RELATED ARTICLES
- Advertisment -
Google search engine

Most Popular