ಬಜಪೆ:ಬಿಲ್ಲವ ಸಮಾಜ ಸೇವಾ ಸಂಘ ಪೆರ್ಮುದೆ – ಎಕ್ಕಾರು ಇದರ ವತಿಯಿಂದ ಬಿಲ್ಲವ ಕ್ರೀಡಾಕೂಟವು ಪೆರ್ಮುದೆ ಬಿಲ್ಲವ ಸಮಾಜ ಸೇವಾ ಸಂಘದ ವಠಾರದಲ್ಲಿ ಭಾನುವಾರದಂದು ನಡೆಯಿತು.

ಕ್ರೀಡಾ ಕೂಟವನ್ನು ಸಂಘದ ಗೌರವಾಧ್ಯಕ್ಷ ಯಾದವ ಕೋಟ್ಯಾನ್ ಪೆರ್ಮುದೆ ಅವರು ಉದ್ಘಾಟಿಸಿದರು.ಕ್ರೀಡಾಕೂಟದಲ್ಲಿ ಮಕ್ಕಳಿಗಾಗಿ 50 ಮಿ ಓಟ,ಕಪ್ಪೆ ಜಿಗಿತ,ಸಂಗೀತ ಖುರ್ಚಿ,ನಿಂಬೆ ಹಣ್ಣು, ಚಮಚ ಓಟ,ಚೆಂಡು ಪಾಸಿಂಗ್ ಸ್ಪರ್ಧೆಗಳು ನಡೆಯಿತು. ಮಹಿಳೆಯರಿಗಾಗಿ ಹಗ್ಗ ಜಗ್ಗಾಟ,ಥ್ರೋ ಬಾಲ್ ಸಂಗೀತ ಖುರ್ಚಿ,100ಮೀ ಓಟ, ಮಡಕೆ ಒಡೆಯುವುದು ಹಾಗೂ
ಪುರುಷರಿಗಾಗಿ ಕ್ರಿಕೆಟ್ ಸೂಪರ್ ಸಿಕ್ಸ್,ಹಗ್ಗ ಜಗ್ಗಾಟ, ಕಬ್ಬಡಿ ವಾಲಿಬಾಲ್,100 ಮೀ ಓಟ, ಮಡಕೆ ಒಡೆಯುವ ಸ್ಪರ್ಧೆಗಳು ನಡೆಯಿತು.

ಈ ಸಂದರ್ಭ ಸಂಘದ ಅಧ್ಯಕ್ಷ ಪ್ರಕಾಶ್ ಕುಕ್ಯಾನ್, ಗೌರವ ಸಲಹೆಗಾರರಾದ ರಮಾನಂದ ಪೂಜಾರಿ, ದೀಪಕ್ ಪೆರ್ಮುದೆ,ಸುದೀಪ್ ಅಮೀನ್, ಸಂಘಟನಾ ಕಾರ್ಯದರ್ಶಿ ಶಿವರಾಮ್ ಕೋಟ್ಯಾನ್ ಪೆರ್ಮುದೆ,ಅರ್ಚಕ ಹೊನ್ನಯ ಅಮೀನ್ ,ಪ್ರಧಾನ ಕಾರ್ಯದರ್ಶಿ ನವೀನ್ ಪಿ.ಅಮೀನ್,ಉಪಾಧ್ಯಕ್ಷ ಮೋಹನ್ ಸುವರ್ಣ ಹಾಗೂ ಸರ್ವಸದಸ್ಯರುಗಳು ಹಾಜರಿದ್ದರು.