ಮಂಗಳೂರು: ಬಿಲ್ಲವ ಸಮಾಜ ಸೇವಾ ಸಂಘ (ರಿ.), ಹಳೆಯಂಗಡಿ ಮತ್ತು ಯುವ ವಾಹಿನಿ (ರಿ.) ಹಳೆಯಂಗಡಿ ಘಟಕದ ಸಹಯೋಗದಲ್ಲಿ ಜು.28ರಂದು ʻಆಟಿದ ಪೊರ್ಲು ಪೊಲಿಕೆʼ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಳೆಯಂಗಡಿಯ ಬಿಲ್ಲವ ಭವನದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ.
ಎಂಆರ್‌ಪಿಎಲ್ ಜಿಜಿಎಲ್ ಕೃಷ್ಣ ಹೆಗ್ಡೆಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೆನರಾ ಕಾಲೇಜು, ಮಂಗಳೂರು ಇದರ ನಿವೃತ್ತ ಉಪಾನ್ಯಾಸಕಿ ತಾರಾ ಕುಮಾರಿ ಉಪಾನ್ಯಾಸ ನೀಡಲಿದ್ದಾರೆ. ಬಿಲ್ಲವ ಸಮಾಜ ಸೇವಾ ಸಂಘ, ಹಳೆಯಂಗಡಿ ಘಟಕದ ಅಧ್ಯಕ್ಷ ಚಂದ್ರಶೇಖರ್ ನಾನಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.