Wednesday, September 11, 2024
Homeರಾಷ್ಟ್ರೀಯಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ 35ನೇ ವಾರ್ಷಿಕೋತ್ಸವ

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ 35ನೇ ವಾರ್ಷಿಕೋತ್ಸವ

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಡೊಂಬಿವಲಿಯ ಸ್ಥಳೀಯ ಕಚೇರಿಯ 35ನೇ ವಾರ್ಷಿಕೋತ್ಸವದ ಉದ್ಘಾಟನಾ – ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಗಸ್ಟ್ 4 ರಂದು ಸಂಜೆ 4 ಗಂಟೆಯಿಂದ
ಡೊಂಬಿವಲಿ ಪೂರ್ವದ ಶಿವಂ ಬಾಂಕ್ವೆಟ್ ಹಾಲ್ ನ ಸಭಾಂಗಣದಲ್ಲಿ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಮಂಗಳೂರಿನ ತುಡರ್ ಕಲಾವಿದೆರ್ ಕಲ್ಲಡ್ಕ ತಂಡದ ಪ್ರಭುದ್ದ ಕಲಾವಿದರಿಂದ “ಕುಸಾಲ್ದ ಗೊಂಚಿಲ್ ” ಹಾಸ್ಯ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ತುಡರ್ ಕಲಾವಿದರು ತಂಡದ ಹೆಮ್ಮೆಯ ಕಲಾವಿದರಾದ ಜೀ ಕನ್ನಡ ಕಾಮಿಡಿ ಖಿಲಾಡಿಗಳು ಖ್ಯಾತಿಯ ಪ್ಯಾಂಕು ಪ್ಯಾಂಕು ಹಿತೇಶ್ ಕಾಪಿನಡ್ಕ, ದಿವ್ಯ ಅಂಚನ್ ಬೆಳ್ತಂಗಡಿ , ಕಲರ್ಸ್ ಕನ್ನಡ ಕಾಮಿಡಿ ಕಂಪನಿ ಖ್ಯಾತಿಯ ರಂಜಿತ್ ನೀರುಮಾರ್ಗ, ಕಲಾತಿಲಕ ತಿಲಕ್ ರಾಜ್ ಕಾಟಿಪಳ್ಳ, ಹೃತಿಕ್ ಪೂಜಾರಿ ಕಲ್ಲಡ್ಕ , ನರೇಶ್ ಕುಮಾರ್ ಸಸಿಹಿತ್ಲು, ಬಾಸ್ಕರ ಕೋಟ್ಯಾನ್ ಸಸಿಹಿತ್ಲು, ದೇವರಾಜ್ ಅಡ್ಯನಡ್ಕ ಮುಂತಾದವರು ಅಭಿನಯಿಸಲಿದ್ದು
ಮಧು ಬಂಗೇರ ಕಲ್ಲಡ್ಕ ಇವರ ನಿರ್ದೇಶನ ಮತ್ತು ಸಂಗೀತವಿದೆ.
ಸಮಾಜಭಾಂಧವರು ಕಲಾಪ್ರೇಮಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಲಾಗಿದೆ.

RELATED ARTICLES
- Advertisment -
Google search engine

Most Popular