ತಿರುವನಂತಪುರಂ: ಸ್ವಾತಂತ್ರ್ಯ ದಿನದಂದು ಕೇರಳದ ಶಾಲೆಯೊಂದರಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿದೆ. ಈ ಕುರಿತ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡುತ್ತಿದ್ದ ವೇಳೆ, ರಾಷ್ಟ್ರಧ್ವಜ ಅರಳದೆ ಸಿಲುಕಿಕೊಂಡಿತ್ತು. ಈ ವೇಳೆ ಎಲ್ಲಿಂದಲೋ ಬಂದ ಹಕ್ಕಿಯೊಂದು ರಾಷ್ಟ್ರಧ್ವಜ ಅರಳಲು ಸಹಾಯ ಮಾಡಿ ಅಲ್ಲಿಂದ ಹಾರಿ ಹೋದ ಘಟನೆ ನಡೆದಿದೆ. ಈ ದೃಶ್ಯದ ವಿಡಿಯೋ ದಾಖಲಾಗಿದ್ದು, ಅದು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
ಧ್ವಜಾರೋಹಣ ಮಾಡುವಾಗ ಧ್ವಜ ಕಂಬದ ಮೇಲೆ ಧ್ವಜ ಏರಿಸಿದ ಬಳಿಕ ಅರಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅದು ಸ್ವಲ್ಪ ಹೊತ್ತು ಅಡಚಣೆಯಂತೆ ಕಂಡುಬರುತ್ತದೆ. ಆದರೆ ಧ್ವಜ ಅರಳದಿದ್ದಾಗ ಅಲ್ಲಿಗೊಂದು ಹಕ್ಕಿ ಹಾರಿ ಬಂದು ಧ್ವಜದ ಮೇಲೆ ಕುಳಿತು ಧ್ವಜ ಅರಳಲು ಸಹಕರಿಸಿದ ಹಾಗೆ ವಿಡಿಯೋದಲ್ಲಿ ದಾಖಲಾಗಿದೆ.
ವೀಡಿಯೋ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ…