Tuesday, April 22, 2025
HomeUncategorizedವಿಶ್ವಕೊಂಕಣಿ ಕೇಂದ್ರದಲ್ಲಿ ಕೊಂಕಣಿ ಲೋಕಕವಿ ಡಾ. ಮನೋಹರ್ ರಾಯ್ ಸರ್ದೆಸಾಯ್ ಜನ್ಮಶತಾಬ್ದಿ ಸಮಾರಂಭ 

ವಿಶ್ವಕೊಂಕಣಿ ಕೇಂದ್ರದಲ್ಲಿ ಕೊಂಕಣಿ ಲೋಕಕವಿ ಡಾ. ಮನೋಹರ್ ರಾಯ್ ಸರ್ದೆಸಾಯ್ ಜನ್ಮಶತಾಬ್ದಿ ಸಮಾರಂಭ 

ತಮ್ಮ ವೈವಿಧ್ಯ ಶೈಲಿ-ವಸ್ತುಗಳೊಂದಿಗೆ ಕೊಂಕಣಿ ಕಾವ್ಯ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದುದಲ್ಲದೆ ಸರಳ ನಾಣ್ಣುಡಿ ರೂಪದ ಕವಿತೆಗಳನ್ನು ರಚಿಸಿ ಲೋಕಕವಿಯೆಂದೆ ಪ್ರಸಿದ್ದಿಪಡೆದ ಡಾ ಮನೋಹರ್ ರಾಯ್ ಸರ್ದೆಸಾಯ್-ಇವರ ಜನ್ಮಶತಾಬ್ದಿ ಕಾರ್ಯಕ್ರಮವು ವಿಶ್ವಕೊಂಕಣಿ ಕೇಂದ್ರದಲ್ಲಿ ಜರುಗಿತು.

ದಿನಪೂರ್ತಿ ಕಾರ್ಯಕ್ರಮವು   ಮನೋಹರ್ ರಾಯ್ ಯವರ ಸಾಕ್ಷ್ಯಚಿತ್ರ ಪ್ರದರ್ಶನದೊಂದಿಗೆ ಪ್ರಾರಂಭಗೊಂಡು ಹಿರಿಯ ಕೊಂಕಣಿ ಕವಿ ಮೆಲ್ವಿನ್ ರೊಡ್ರಿಗಸ್ ಇವರ ಅಧ್ಯಕ್ಷತೆಯಲ್ಲಿ                   “ಮನೋಹರ್ ರಾಯ್ ಜೀವನ ಹಾಗೂ ಸ್ಪೂರ್ತಿ” ಯೆಂಬ ಗೋಷ್ಟಿಯೊಂದಿಗೆ ಮುಂದುವರಿಯಿತು. ವಿಚಾರಗೋಷ್ಟಿಯಲ್ಲಿ ಹೆಸರಾಂತ ಕವಿ ಆರ್.ಎಸ್. ಭಾಸ್ಕರ್, ಸುನಿಲ್  ಸರ್ದೆಸಾಯ್, ಹಾಗೂ ವಿಲ್ಫ್ರೆಡ್ ಇವರು ಭಾಗವಹಿಸಿದರು. ಶಿಕ್ಷಕಿ ಐಶ್ವರ್ಯಾ ಭಟ್, ವಿದ್ಯಾರ್ಥಿನಿ ದಿವಾ ಆನಂತ್ ಪೈಯವರು ನಿರ್ವಹಿಸಿದ ಕಾರ್ಯಕ್ರಮದಲ್ಲಿ  ಡಾ ಮನೋಹರ್ ರಾಯ್ ಸರ್ದೆಸಾಯ್   ಆಯ್ದ ಬಾಲಗೀತೆಗಳನ್ನು ಬೇರೆ ಬೇರೆ ಶಾಲೆಗಳಿಂದ ಬಂದ ಪುಟಾಣಿ ಮಕ್ಕಳು ಸುಂದರ ಆಭಿನಯದೊಂದಿಗೆ ಹಾಡಿ ತೋರಿಸಿದರು

 ಮನೋಹರ್ ರಾಯ್ ಯವರ ಅಯ್ದ ಏಳು ಹಾಡುಗಳಿಗೆ ಸಂಗೀತ ವಿಧೂಷಿ ನಂದಿತಾ ಪೈ ಇವರ ನಿರ್ದೆಶನದೊಂದಿಗೆ ಶಾಸ್ತ್ರೀಯ ಸಂಗೀತದ ಶೈಲಿಯಲ್ಲಿ ವಿದೂಷಿ ಮೆಘಾ ಪೈ, ವಿದ್ವಾನ್ ಮುರಲೀಧರ ಶೆಣೈ ಮುಂತಾದ ವಿವಿಧ ಕಲಾವಿದರು ಹಾಡಿದರು. ಮುರಳೀಧರ ಕಾಮತ್ ಇವರು ಹಿಮ್ಮೇಳ ಒದಗಿಸಿದರು. ಆ ಬಳಿಕ ಗೋವಾದ ಅನಂತ್ ಅಗ್ನಿ ಸಂಗೀತ ತಂಡದವರಿಂದ “ಮನೋಹರ ದರ್ಶನ” ವೆಂಬ ಪ್ರಸ್ತುತಿ ನಡೆಯಿತು.

ಈ ಸಂದರ್ಭದಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗೋವಾ ರಾಜ್ಯಭಾಷಾ ನಿರ್ದೇಶನಾಲಯದ ಉಪನಿರ್ದೆಶಕರಾದ ಅನಿಲ್ ಸಾವಂತ್ ರವರು ತಾನು ಕೊಂಕಣಿ ಎಮ್.ಎ. ಮಾಡಲು ಮನೊಹರ್ ರಾಯ್-ಯವರಿಂದ ಹೇಗೆ ಪ್ರಭಾವಿತನಾದ ಪ್ರಸಂಗವನ್ನು ವಿವರಿಸಿ ಅವರ ಪ್ರೇರಪಣೆಯನ್ನು ಶ್ಲಾಘಿಸಿದರು. ಮನೋಹರ್ ರಾಯ್ ಸರ್ದೆಸಾಯ್-ಯವರ ಇಬ್ಬರು ಸುಪುತ್ರರಾದ ಸುನಿಲ್ ಸರ್ದೆಸಾಯ್, ಉಮೇಶ ಸರ್ದೆಸಾಯ್, ಹಾಗೂ ಸುಪುತ್ರಿ ಮಾಯಾ ಸರ್ದೆಸಾಯ್-ಯವರು, ಕವಿಮನಸಿನ ತಂದೆಯವರ ಜತೆಗಿನ ಅನುಭವಗಳನ್ನು ಅದರಲ್ಲೂ ವಿಶೇಷವಾಗಿ ಮಕ್ಕಳೊಂದಿಗೆ ಮಕ್ಕಳಾಗಿ ಸಂತಸಪಡುತ್ತಿದ್ದುದು, ತಾನು ಪ್ರೌಡಿಮೆ ಹೊಂದಿದ್ದ ಫ್ರೆಂಚ್ ಭಾಷೆಯ ಜತೆಗೆ ಮಾತೃಭಾಷೆ ಕೊಂಕಣಿಗಾಗಿ ನೀಡುತ್ತಿದ್ದ ಅತೀವ ಪ್ರೀತಿಯನ್ನು, ಸ್ವಾರಸ್ಯಕರ ಸನ್ನಿವೇಶಗಳೊಂದಿಗೆ ಹಂಚಿಕೊಂಡರು. ಮುಖ್ಯ ಅತಿಥಿ, ಅಖಿಳ ಭಾರತ ಕೊಂಕಣಿ ಪರಿಷದ್ ಇದರ ಅಧ್ಯಕ್ಷರಾದ ವಂ.ಮೌಝಿನೊ-ದ-ಆಟಾಯಡೆ ಅಂತರಾಜ್ಯ ಮಟ್ಟದಲ್ಲಿ ಕೊಂಕಣಿಗರನ್ನು ಒಂದಾಗಿಸಿ ಶತಮಾನ ಉತ್ಸವ ಆಚರಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗೋವಾ ಭಾಷಾಮಂಡಳದ ಅಧ್ಯಕ್ಷೆ ರತ್ನಮಾಲಾ ದೀವ್ಕಾರ್ ಇವರು ಸೂಕ್ತ ಸಂದೇಶವಿತ್ತರು.

ಕೇಂದ್ರದ ಉಪಾಧ್ಯಕ್ಷರಾದ ರಮೇಶ್ ನಾಯಕ್ ಸ್ವಾಗತಿಸಿದರು, ಕಾರ್ಯದರ್ಶಿ ಡಾ ಕಸ್ತೂರಿ ಮೋಹನ್ ಪೈ ವಂದಿಸಿದರು, ಕೋಶಾಧಿಕಾರಿ ಬಿ ಆರ್ ಭಟ್, ಶತಾಬ್ದಿ ಉತ್ಸವದ ಸಂಚಾಲಕ ಗೋಕುಲದಾಸ ಪ್ರಭು, ಸಿಎಒ ಡಾ ಬಿ ದೇವದಾಸ ಪೈ ಉಪಸ್ಥಿತರಿದ್ದರು. ಡಾ ವಿಜಯಲಕ್ಶ್ಮಿ ಹಾಗೂ ಸುಚಿತ್ರಾ ನಾಯಕ್ ಕಾರ್ಯಕ್ರಮ ನಿರೂಪಣೆ ಮಾಡಿದರು. 

RELATED ARTICLES
- Advertisment -
Google search engine

Most Popular